ಗ್ಯಾಸ್‌ ಸಿಲಿಂಡರ್‌ ಲಾರಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ

ಸಿದ್ದಾಪುರ : ದಾವಣಗೆರೆಯಿಂದ ಮಂಗಳೂರಿಗೆ ಗ್ಯಾಸ್‌ ಸಿಲಿಂಡರ್‌ ತುಂಬಿಸಲು ಸಾಗುತ್ತಿದ್ದ ಲಾರಿಯೊಂದು ಸಿದ್ದಾಪುರ ಶಂಕರನಾರಾಯಣ ರಾಜ್ಯ ಹೆದ್ದಾರಿಯ ಮಧ್ಯದ ಕಾರೆಬೈಲು ಎಂಬಲ್ಲಿ ಬುಧವಾರ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆ ಮೇಲೆ ಉರುಳಿ ಬಿದ್ದಿದೆ.

ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆ ಮೇಲೆ ಉರುಳಿದ ಪರಿಣಾಮ ಲಾರಿಯ ಚಾಲಕ ಹರಪ್ಪನಹಳ್ಳಿಯ ಚಮನ್‌ ಷರೀಫ್‌ ಅವರ ಕಾಲುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಲಾರಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರೆಬೈಲು ಸುತ್ತ ಮುತ್ತಲಿನ ಮನೆಗಳಿಗೆ ವಿದ್ಯುತ್‌ ಸಂಪರ್ಕವಿಲ್ಲದೇ ತೊಂದರೆಗೊಳಗಾದರು. ಲಾರಿಯಲ್ಲಿ ಖಾಲಿ ಗ್ಯಾಸ್‌ ಸಿಲಿಂಡರುಗಳು ಇರುವುದರಿಂದಾಗಿ ಯಾವುದೆ ಆಪಾಯಗಳು ಸಂಭವಿಸಲ್ಲಿಲ್ಲ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com