ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಬೆಂಗಳೂರು: ರಾಜಧಾನಿಯಲ್ಲೊಂದು ಅಮಾನುಷ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದೆ. ನಗರದ ವೈಟ್‌ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳ್ಳಂದೂರು ಬಳಿ ಶನಿವಾರ ಸಂಜೆ ಈ ಕುಕೃತ್ಯ ನಡೆದಿದೆ. ಬ್ಯೂಟಿಪಾರ್ಲರಿನಲ್ಲಿ ಉದ್ಯೋಗ ಮಾಡುತ್ತಿರುವ ಯುವತಿಯನ್ನು ಕಾಮುಕರು ಕಾರಿನಲ್ಲಿ ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಾಧಿತ ಯುವತಿಯು ಬೆಳಂದೂರು ಬಳಿ ಇರುವ ಬ್ಯೂಟಿ ಪಾರ್ಲರ್‌ ಉದ್ಯೋಗಿಯಾಗಿದ್ದಾರೆ. ಯುವತಿಯು ನಿನ್ನೆ ಸಂಜೆ ಕೆಲಸ ಮುಗಿಸಿಕೊಂಡು ಮನೆ ಕಡೆ ನಡೆದು ಹೋಗುತ್ತಿದ್ದಾಗ ಮಳೆ ಬಂದಿದೆ. ಹಾಗಾಗಿ ಬಸ್‌ ನಿಲ್ದಾಣದಲ್ಲೇ ನಿಂತುಕೊಂಡಿದ್ದಾರೆ. ಆದರೆ ಅದೇ ವೇಳೆಗೆ ಕಾರಿನಲ್ಲಿ ಬಂದ ನಾಲ್ವರು ಆಕೆಗೆ ಡ್ರಾಪ್ ಕೊಡುವುದಾಗಿ ಹೇಳಿದ್ದಾರೆ. ಅದಕ್ಕೆ ಯುವತಿ ನಿರಾಕರಿಸಿದ್ದಾರೆ. ಆದರೆ ದುಷ್ಕರ್ಮಿಗಳು ಬಲವಂತವಾಗಿ ಯುವತಿಯನ್ನು ಕಾರಿನೊಳಕ್ಕೆ ಎಳೆದುಕೊಂಡು, ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಚನ್ನಸಂದ್ರದ ಬಳಿ ನಿರ್ಜನ ಪ್ರದೇಶಕ್ಕೆ ಬರುತ್ತಿದ್ದಂತೆ ಕಾರು ನಿಲ್ಲಿಸಿ ಆಕೆಯ ಮೇಲೆ ಬಲತ್ಕಾರ ಮಾಡಿದ್ದಾರೆ. ನಂತರ ಪುನಃ ಆಕೆಯನ್ನು ಕಾರಿನಲ್ಲೇ ಸುತ್ತಾಡಿಸಿ, ಮಧ್ಯರಾತ್ರಿ ಅದೇ ಸ್ಥಳಕ್ಕೆ ಬಂದಿದ್ದಾರೆ. ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಯುವತಿಯು ನಂತರ ಹೇಗೋ ಅವರ ಕಪಿಮುಷ್ಟಿಯಿಂದ ಪಾರಾಗಿದ್ದಾಳೆ. ಸಮೀಪದ ಎರಡಂತಸ್ತಿನ ಕಟ್ಟಡದೊಳಗೆ ಹೋಗಿ ಬಾಗಿಲು ತಟ್ಟಿದ್ದಾರೆ. ನೆಲಮಾಳಿಗೆಯಲ್ಲಿರುವವರು ಬಾಗಿಲು ತೆರೆಯದಿದ್ದಾಗ ಮೊದಲ ಮಹಡಿಯಲ್ಲಿ ವಾಸವಾಗಿದ್ದ ರಾಜಣ್ಣ ಎಂಬುವರ ಮನೆ ತಟ್ಟಿದ್ದಾರೆ. ಅವರೂ ತೆಗೆಯದಿದ್ದಾಗ 2ನೇ ಮಹಡಿಗೆ ಓಡಿದ್ದಾರೆ. ಅಲ್ಲಿ ಉತ್ತರ ಭಾರತೀಯ ಕುಟುಂಬವೊಂದು ವಾಸವಾಗಿದ್ದು ಬಾಗಿಲು ತೆರೆದರೂ ಯುವತಿಯ ಭಾಷೆ ಅರ್ಥ ಮಾಡಿಕೊಳ್ಳಲು ವಿಫಲರಾಗಿ ಅವರು ಕೆಳಗೆ ಹೋಗಿ ವಾಪಸ್ ದೂಡಿದ್ದಾರೆ. ಅಷ್ಟರೊಳಗೆ ಮೊದಲ ಮಹಡಿಯಲ್ಲಿದ್ದ ರಾಜಣ್ಣ ಅವರು ಬಾಗಿಲು ತೆರೆದಿದ್ದಾರೆ. ಜೀವ ಉಳಿಯುತ್ತೆಂದು ಈ ಯುವತಿ ಅತ್ತ ಓಡಿ ಹೋಗುವಷ್ಟರಲ್ಲೇ ಈ ಕಾಮುಕರು ಆಕೆಯನ್ನು ಹುಡುಕಿಕೊಂಡು ಅಲ್ಲಿಗೂ ಬಂದಿದ್ದಾರೆ. ನೋಡನೋಡುತ್ತಿದ್ದಂತೆ ಗಲಾಟೆ ನಡೆದು ಸ್ಥಳೀಯರು ಗುಂಪು ಸೇರಿಸುತ್ತಿರುವುದನ್ನು ನೋಡಿ ವ್ಯಗ್ರರಾದ ಕಾಮುಕರು ಯುವತಿಯನ್ನು ಮೊದಲ ಮಹಡಿಯಿಂದ ತಳ್ಳಿ ಪರಾರಿಯಾಗಿದ್ದಾರೆ. ಸದ್ಯ, ಸಂತ್ರಸ್ತ ಯುವತಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com