ಬೈಂದೂರು: ಇಲ್ಲಿನ ಸಮೀಪದ ಉಪ್ಪುಂದ ಸೇತುವೆ ಬಳಿ ಮುಂಜಾನೆ ಉಪ್ಪುಂದದಿಂದ ಯಡ್ತರೆಯಿಂದ ಸೈಕಲ್ ಏರಿ ಬರುತ್ತಿದ್ದ ವ್ಯಕ್ತಿ ರಸ್ತೆ ಬದಿಯ ಹೊಂಡ ತಪ್ಪಿಸುವಾಗ ಆಯತಪ್ಪಿ ರಸ್ತೆಯ ಮೇಲೆ ಬಿದ್ದಾಗ ಅದೇ ಸಮಯದಲ್ಲಿ ಹಿಂದಿನಿಂದ ಬಂದ ಅಪರಿಚಿತ ವಾಹನವೊಂದು ಸೈಕಲ್ ಸವಾರನ ತಲೆಯ ಮೇಲೆ ಹರಿದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದ ತೀವ್ರತೆಗೆ ವ್ಯಕ್ತಿಯ ತಲೆಯ ಭಾಗ ಸಂಪೂರ್ಣ ಛಿದ್ರಗೊಂಡಿದೆ
ಮೃತ ಪಟ್ಟ ವ್ಯಕ್ತಿಯನ್ನು ಉಪ್ಪುಂದ ಗ್ರಾಮದ ಕಾಸನಾಡಿಯ ಮಂಜುನಾಥ ದೇವಾಡಿಗ (60 ವರ್ಷ) ಎಂದು ಗುರುತಿಸಲಾಗಿದೆ. ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.