ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಕ್ಷೇತ್ರ ದರ್ಶನಕ್ಕಾಗಿ ಬೆಂಗಳೂರಿನಿಂದ ಆಗಮಿಸಿದ್ದ ಒಂದೇ ಕುಟುಂಬದ ನಾಲ್ವರು ವಸತಿ ಗೃಹದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಜೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ರಾಜಾಜಿನಗರದ ಕಿಲೋರಿ ರಸ್ತೆಯ ನಿವಾಸಿಯೆಂದು ಮೇ.7ರಂದು ಮುಂಜಾನೆ 5ಗಂಟೆಗೆ ಸುಬ್ರಹ್ಮಣ್ಯದ ಖಾಸಗಿ ವಸತಿಗೃಹವೊಂದರಲ್ಲಿ ವಿಳಾಸ ನೀಡಿ ಕೊಠಡಿ ಪಡೆದ ನಂಜುಂಡಯ್ಯ(45) ಅವರು ಪತ್ನಿ ಜಯಲಕ್ಷ್ಮೀ (39), ಪುತ್ರ ಪವನ್‌(13), ಪುತ್ರಿ ಶ್ರೀಲಕ್ಷ್ಮೀ (8) ವಸತಿ ಗೃಹದಲ್ಲಿ ತಂಗಿದ್ದರು. ನಂಜುಂಡಯ್ಯ ಹಣೆಗೆ ವಿಭೂತಿ ಹಚ್ಚಿದ್ದು ಪತ್ನಿ ಮತ್ತು ಪುತ್ರನ ಕೈಯಲ್ಲಿ ಎರಡು ಬ್ಯಾಗ್‌ಗಳು ಇರುವುದು ಅವರು ವಸತಿಗೃಹಕ್ಕೆ ಪ್ರವೇಶಿಸಿದ ವೇಳೆ ಸಿಸಿ ಕೆಮರಾದಲ್ಲಿ ದಾಖಲಾಗಿದೆ.

ನಂಜುಂಡಯ್ಯ ಕುಟುಂಬವು ವಸತಿಗೃಹದ ನಾಲ್ಕನೇ ಮಹಡಿಯಲ್ಲಿ ಕೊಠಡಿ ಪಡೆದು ತಂಗಿದ್ದರು. ಬುಧವಾರದಂದು ನಂಜುಂಡಯ್ಯ ಕುಟುಂಬವು ದೇವರ ದರ್ಶನ ಮಾಡಿ ವಸತಿ ಗೃಹಕ್ಕೆ ಹಿಂತಿರುಗಿತ್ತು ಎಂದು ತಿಳಿದು ಬಂದಿದೆ. ಕೊಠಡಿ ಪಡೆದು ನಾಲ್ಕು ದಿನವಾದರೂ ಈ ಕುಟುಂಬ ಕೊಠಡಿ ತೆರವುಗೊಳಿಸಿರಲಿಲ್ಲ.ಶನಿವಾರ ಮದ್ಯಾಹ್ನ ನಂಜುಂಡಯ್ಯ ಕುಟುಂಬ ತಂಗಿದ್ದ ಕೊಠಡಿಯ ಹೊರಗೆ ದುರ್ನಾತ ಬರುವುದನ್ನು ಗಮನಿಸಿದ ರೂಂ ಬಾಯ್‌ ಮಾಲೀಕರಿಗೆ ವಿಷಯ ತಿಳಿಸಿದರು. ತದನಂತರ ಮಾಹಿತಿ ಪಡೆದ ಪೊಲೀಸರು ವಸತಿ ಗೃಹಕ್ಕೆ ಆಗಮಿಸಿ ನಂಜುಂಡಯ್ಯ ತಂಗಿದ್ದ ಕೊಠಡಿಯನ್ನು ಹೊರಗಿನಿಂದ ಕಿಟಕಿಯ ಮೂಲಕ ನೋಡಿದಾಗ ನಂಜುಂಡಯ್ಯ ಕುಟುಂಬದ ನಾಲ್ವರು ಹಾಸಿಗೆಯ ಮೇಲೆ ಶವವಾಗಿರುವುದು ಕಂಡು ಬಂದಿದೆ. ಇವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದ್ದು, ಕಾರಣ ತಿಳಿದು ಬಂದಿಲ್ಲ.

ಕೊಠಡಿಯ ಒಳಗಿನ ಬಾಗಿಲಿಗೆ ಚಿಲಕ ಹಾಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಅವರು ತಂಗಿದ್ದ ಕೊಠಡಿಯ ಬಾತ್‌ ರೂಂನಲ್ಲಿ ಒದ್ದೆ ಬಟ್ಟೆಗಳಿದ್ದು, ಬಾತ್‌ ರೂಂನ ಲೈಟ್‌ ಉರಿಯುತ್ತಿರುವುದು ಗಮನಕ್ಕೆ ಬಂದಿದೆ. ವಸತಿ ಗೃಹದ ನಾಲ್ಕನೇ ಮಹಡಿಯಲ್ಲಿ ನಂಜುಂಡಯ್ಯ ಕುಟುಂಬದವರು ಸಾವನ್ನಪ್ಪಿದ ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದು, ಬುಧವಾರ ಆಥವಾ ಗುರುವಾರ ರಾತ್ರಿ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com