ಬ್ಯಾಂಕ್‌ ವ್ಯಾನಿನಿಂದ 1 ಕೋಟಿ ರೂ. ಲೂಟಿ

ಪಟ್ನಾ: ಯೂನಿಯನ್‌ ಬ್ಯಾಂಕ್‌ನ ಹಣದ ವ್ಯಾನ್‌ ಅನ್ನು ಅಡ್ಡಗಟ್ಟಿ ಬಂದೂಕುಧಾರಿ ಗೂಂಡಾಗಳು ರಾಜ್ಯ ರಾಜಧಾನಿಯ ಹೊರವಲಯದಲ್ಲಿ  ಒಂದು ಕೋಟಿ ರೂ.ನಗದನ್ನು ಲೂಟಿ ಮಾಡಿದ್ದಾರೆ.

ಪೊಲೀಸರ ಪ್ರಕಾರ ಹಣವನ್ನು ಪಟ್ನಾದಿಂದ ಜಮೂಯಿ ಎಂಬಲ್ಲಿಗೆ ಸಾಗಿಸಲಾಗುತ್ತಿತ್ತು. ಫ‌ತುಹಾ ಎಂಬಲ್ಲಿನ ಬಿಖುವಾ ಗ್ರಾಮದ ಬಳಿ ಕಾರಿನಲ್ಲಿ ಬಂದ ಸುಮಾರು ಆರು ಮಂದಿ ಶಸ್ತ್ರಧಾರಿ ಗೂಂಡಾಗಳು ಬ್ಯಾಂಕಿನ ಹಣವಿದ್ದ ವ್ಯಾನನ್ನು ಅಡ್ಡಗಟ್ಟಿ ಒಂದು ಕೋಟಿ ರೂ.ಗಳನ್ನು ಲೂಟಿ ಮಾಡಿದರು. 

ಶಸ್ತ್ರಧಾರಿ ಗೂಂಡಾಗಳು ವ್ಯಾನಿನಲ್ಲಿದ್ದ ಸಿಬಂದಿಗಳನ್ನು ಬೆದರಿಸಲು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದರು. ಅನಂತರ ವ್ಯಾನಿನ ಬಾಗಿಲನ್ನು ಬಲವಂತವಾಗಿ ಹೊಡೆದು ತೆರೆದು ನಗದನ್ನು ತೆಗೆದು ತಮ್ಮ ಕಾರಿಗೆ ತುಂಬಿಕೊಂಡರು. 

ಕೆಲವೇ ನಿಮಿಷಗಳಲ್ಲಿ ಒಂದು ಕೋಟಿ ರೂ.ನಗದನ್ನು ದೋಚಿ ಪರಾರಿಯಾದರು ಎಂದು ಫ‌ತುವಾ ಎಸ್‌ಎಚ್‌ಓ ಸಂಜೀವ ಕುಮಾರ್‌ ಸಿನ್ಹಾ ಹೇಳಿದರು. 

ಈ ದರೋಡೆ ಪ್ರಕರಣದಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ. ಆದರೆ ಇದು ರಾಜಧಾನಿಯಲ್ಲಿ ಭೀತಿಯ ವಾತಾವಣವನ್ನು ಸೃಷ್ಟಿಸಿದೆ. 

ದರೋಡೆಕೋರರನ್ನು ಪತ್ತೆಹಚ್ಚಲು ಹಲವು ಪೊಲೀಸ್‌ ತಂಡಗಳನ್ನು ರಚಿಸಲಾಗಿದ್ದು ಕಾರ್ಯಾಚರಣೆಗೆ ಇಳಿಸಲಾಗಿದೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com