ದಾಖಲೆಗಳಿಲ್ಲದ ನಗದು ವಶ‌

ಕುಂದಾಪುರ: ತಾಲೂಕಿನ ಹೊಸಂಗಡಿ ಗ್ರಾ. ಪಂ.ನ ಕೆರೆಕಟ್ಟೆಯ ಬಳಿಯ ಚೆಕ್‌ಪೋಸ್ಟ್‌ ಹತ್ತಿರ ಯಾವುದೇ ದಾಖಲೆಗಳಿಲ್ಲದ ನಗದು ಹಾಗೂ ಚುನಾವಣಾ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಎರಡು ಕಾರುಗಳನ್ನು ಚುನಾವಣಾ ವಿಚಕ್ಷಣ ದಳ ಸೋಮವಾರ ವಶಪಡಿಸಿಕೊಂಡಿದೆ.

ಚುನಾವಣಾ ವಿಚಕ್ಷಣ ದಳ ಹಾಗೂ ಪೊಲೀಸರು ಹೊಸಂಗಡಿ ಗ್ರಾ. ಪಂ.ನ ಕೆರೆಕಟ್ಟೆಯ ಬಳಿಯ ಚೆಕ್‌ ಪೋಸ್ಟ್‌ ಹತ್ತಿರ ತಪಾಸಣೆ ನಡೆಸಿದ್ದಾಗ ಕಾರೊಂದರಲ್ಲಿ ಒಂದು ಸಾವಿರ ಮುಖ ಬೆಲೆಯ 75 ಸಾವಿರ ರೂ. ನಗದು ಪತ್ತೆಯಾಗಿದ್ದು, ಇನ್ನೊಂದು ಕಾರಿನಲ್ಲಿ ಜೆಡಿಎಸ್‌ ಪಕ್ಷಕ್ಕೆ ಸೇರಿದ ಕರಪತ್ರ, ಬ್ಯಾನರ್‌ ಹಾಗೂ ಬಂಟಿಕ್ಸ್‌ಗಳು ಪತ್ತೆಯಾಗಿವೆ. ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಚಕ್ಷಣ ದಳದ ಮುಖಸ್ಥರಾದ ಚಂದ್ರಶೇಖರ ಗೌಡ, ರುಕ್ಕೇನ ಗೌಡ, ರಾಘರಾಮ ಶೆಟ್ಟಿ, ರಾಜೇಶ್‌ ಕೆ.ಸಿ., ಗೌಡಪ್ಪ ಗೌಡ, ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳಾದ ಪ್ರಕಾಶ ಎಸ್‌., ಸಂದೇಶ್‌ ಶೆಟ್ಟಿ, ಪರಶಿವ ಎಚ್‌. ಮುಂತಾದವರು ಹಾಜರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com