ಕೋಟೇಶ್ವರದಲ್ಲಿ ಸಂಚಾರ ತಡೆ

ಕುಂದಾಪುರ: ಹಾಲಾಡಿಯಿಂದ ಮಂಗಳೂರಿನ ಕಡೆಗೆ ಸಾಗುತ್ತಿದ್ದ ಜಲ್ಲಿ ಕ್ರಶಿಂಗ್ ಯಂತ್ರ ಹೊತ್ತ ಲಾರಿ ಕೋಟೇಶ್ವರ ಬೈಪಾಸ್‌ನಲ್ಲಿ ತಿರುಗುವಾಗ ಜಾಮ್ ಆದ ಕಾರಣ ಐದು ತಾಸಿಗೂ ಮಿಕ್ಕಿ ಸಂಚಾರ ಸ್ತಬ್ಧಗೊಂಡಿತು. 

ಮಂಗಳೂರಿನತ್ತ ಸಾಗುತ್ತಿದ್ದ 1500 ಟನ್ ಜಲ್ಲಿ ಪುಡಿ ಮಾಡುವ ಬಹತ್ ಯಂತ್ರ ಹೊತ್ತ ಲಾರಿ ಬೈಪಾಸ್‌ನಲ್ಲಿ ತಿರುಗುವ ವೇಳೆ ಲಾರಿಯ ಚೇಸಿಸ್ ಜಾಮ್ ಆದ ಕಾರಣ ಅಲ್ಲಿಯೇ ಝಂಡಾ ಹೂಡಿತು. ಇದರಿಂದ ಹಾಲಾಡಿ, ಕೋಟೇಶ್ವರ, ಮಂಗಳೂರು, ಉಡುಪಿ ಎಲ್ಲೆಡೆ ಹೋಗುವ ವಾಹನಗಳು ಮಧ್ಯದಲ್ಲಿಯೇ ಸಿಲುಕುವಂತಾಯಿತು. 

ಬೈಪಾಸ್‌ನಲ್ಲಿದ್ದ ಸಿಕ್ಕಿಹಾಕಿಕೊಂಡ 10ಕ್ಕೂ ಅಧಿಕ ಲಾರಿ ಚಾಲಕರು, ನೂರಾರು ನಾಗರಿಕರು, ಕುಂದಾಪುರ ಟ್ರಾಫಿಕ್ ಎಸ್‌ಐ ಇಮ್ರಾನ್ ಮತ್ತು ಸಿಬ್ಬಂದಿ ಯಂತ್ರ ಹೊತ್ತ ಲಾರಿಯನ್ನು ಮುಂದಕ್ಕೆ ಸಾಗಿಸುವ ಪ್ರಯತ್ನದಲ್ಲಿ ಶ್ರಮಿಸಬೇಕಾಯಿತು. ಸತತ 5 ತಾಸುಗಳ ಪರಿಶ್ರಮದ ಬಳಿಕ ಮುಂದಕ್ಕೆ ಚಲಿಸಿದ ಪರಿಣಾಮ ನಾಗರಿಕರು, ಹೆದ್ದಾರಿ ಪ್ರಯಾಣಿಕರು ನಿರಾಳರಾದರು. ಮದುವೆ, ಇನ್ನಿತರ ಶುಭಕಾರ್ಯಗಳಿಗೆ ತೆರಳುವವರು ತೀರಾ ತೊಂದರೆ ಅನುಭವಿಸುವಂತಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com