ವೈದ್ಯರಿಗೆ ಪಂಗನಾಮ : ಆರೋಪಿಗಳಿಗೆ ಜಾಮೀನು

ಕುಂದಾಪುರ : ಬೆಂಗಳೂರಿನ ಪ್ರಖ್ಯಾತ ನಾರಾಯಣ ಹೃದಯಾಲಯದ ತಜ್ಞ ವೈದ್ಯರೊಬ್ಬರಿಗೆ 'ಶಾಲಿಗ್ರಾಮ ವಿದ್ಯೆ' ಎಂಬ ವಾಮಾಚಾರ ಪೂಜೆ ಮಾಡಿಸಿ ಕಪ್ಪು ಹಣವನ್ನು ಹೊರತರಿಸಿ ಶ್ರೀಮಂತರನ್ನಾಗಿ ಮಾಡುವ ಆಸೆ ತೋರಿಸಿ ವಂಚಿಸಿದ ಮೂವರು ಆರೋಪಿಗಳಿಗೆ ಶಿವಮೊಗ್ಗ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯ ಜಾಮೀನು ನೀಡಿದೆ.

ಆರೋಪಿತರು ವೈದ್ಯರನ್ನು ಕಾಡಿನೊಳಗೆ ಕರೆದುಕೊಂಡು ಹೋಗಿ ಪೂಜೆ ಮಾಡಿಸುತ್ತಾ , ಪೂಜೆಗೆಂದು ಇಟ್ಟಿದ್ದ ರೂ. ಮೂರು ಲಕ್ಷ ಎತ್ತಿಕೊಂಡು ಪರಾರಿಯಾಗಿದ್ದರು. ಪೂಜೆಯಾಗುತ್ತಿದ್ದಂತೆ ಕಪ್ಪು ಹಣ ತನ್ನಷ್ಟಕ್ಕೆ ತಾನೇ ಹೊರ ಬರುತ್ತದೆ ಎಂಬ ಆರೋಪಿ ಆಶ್ವಾಸನೆ ಹುಸಿಯಾಗಿತ್ತು. ವೈದ್ಯರು ಮೋಸ ಹೋಗಿರುವುದು ಅರಿವಾಗಿ ಶಿವಮೊಗ್ಗದ ದೊಡ್ಡಪೇಟೆ ಆರಕ್ಷಕ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದರು. ಭಾರತೀಯ ದಂಡ ಸಂಹಿತೆಯ ಕಲಂ 420ರ ಕೆಳಗೆ ಪ್ರಕರಣ ದಾಖಲಾಗಿತ್ತು.

ಶಿವಮೊಗ್ಗ ಸೆಷನ್ಸ್‌ ನ್ಯಾಯಾಧೀಶ ಎಸ್‌.ಬಿ.ಅಂಗಡಿಯವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಿದ್ದು, ಅವರ ಪರವಾಗಿ ಕುಂದಾಪುರೆದ ನ್ಯಾಯವಾದಿ ರವಿಕಿರಣ ಮುಡೇìಶ್ವರ ವಾದಿಸಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com