ಕಾರ್ಕಳ: ಇಲ್ಲಿನ ನಿರೆಬೈಲೂರಿನ ಬಳಿ ಬುಧವಾರ ಮಧ್ಯಾಹ್ನ ಕೆಎಸ್ಆರ್ಟಿಸಿ ಬಸ್ ಹಾಗೂ ಬೊಲೇರೊ ವಾಹನದ ನಡುವೆ ಅಪಘಾತ ಸಂಭವಿಸಿ ದಕ್ಷಿಣವಲಯ ಡಿಸಿಪಿ ಲಾಬೂರಾಮ್ ಅವರ ಪತ್ನಿ ಹಾಗೂ ಪೊಲೀಸ್ ಪೇದೆಯೋರ್ವರು ದುರ್ಮರಣಕ್ಕೀಡಾಗಿದ್ದಾರೆ.
ಡಿಸಿಪಿ ಲಾಬೂರಾಮ್ ಅವರ ಕುಟುಂಬ ಧರ್ಮಸ್ಥಳ ಪ್ರವಾಸಕ್ಕೆ ತೆರಳಿ ವಾಪಾಸಾಗುವ ವೇಳೆ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅಪಘಾತದಿಂದ ಬೊಲೇರೊ ವಾಹನದಲ್ಲಿದ್ದ ಪೊಲೀಸ್ ಪೇದೆ ಮಂಜುನಾಥ ಅವರು ಸ್ಥಳದಲ್ಲೆ ಸಾವಿಗೀಡಾದರೆ,
ಡಿಸಿಪಿ ಲಾಬೂರಾಮ್ ಅವರ ಪತ್ನಿ ಗಾಯತ್ರಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಬೊಲೇರೊ ವಾಹನದಲ್ಲಿ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದ್ದು, ಡಿಸಿಪಿ ಅವರ ಪುತ್ರಿಯರು ಗಂಭೀರವಾಗಿ ಗಾಯಗೊಂಡಿದ್ದಾರೆಎಂದು ತಿಳಿದು ಬಂದಿದೆ.