ಮಂಗಳೂರು : ರಟ್ಟಿನ ಪೆಟ್ಟಿಗೆಯೊಳಗೆ ಹುದುಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 8.02 ಲಕ್ಷ ರೂ. ಮೌಲ್ಯದ 272.900 ಗ್ರಾಂ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಾಸರಗೋಡು ತೆಕ್ಕಿಲ ನಿವಾಸಿ ಮೊಹಮ್ಮದ್ ಜಬೀರ್ ಬೈಕ್ಕರ (23) ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಸೋಮವಾರ ಬೆಳಗ್ಗೆ 7.45 ಕ್ಕೆ ದುಬಾಯಿಯಿಂದ ಬಂದ ಜೆಟ್ ಏರ್ವೆàಸ್ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕರ ಲಗೇಜ್ ಬ್ಯಾಗ್ಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಮೊಹಮ್ಮದ್ ಜಬೀರ್ ಬೈಕ್ಕರ ಬಳಿ ಈ ಅಕ್ರಮ ಚಿನ್ನ ಪತ್ತೆಯಾಗಿದೆ.
ಕಸ್ಟಮ್ಸ್ ಇಲಾಖೆಯ ಉಪ ಆಯುಕ್ತ ಹೆಮನ್ ಗೊಗಯ್ ಅವರ ಉಸ್ತುವಾರಿಯಲ್ಲಿ ಅಧೀಕ್ಷಕರಾದ ಬಿ. ಪ್ರಭಾಕರ ಪೂಜಾರಿ, ಸೆಂದಿಲ್ ಮುರುಗನ್, ಬಿ. ಎ. ಕಾರಿಯಪ್ಪ , ಎಚ್. ಜಿ. ಯೋಗೇಶ್, ಇನ್ಸ್ಪೆಕ್ಟರ್ಆಳಾದ ಜಿ.ಕುಮಾರ ಸ್ವಾಮಿ, ಎಸ್. ರಂಜನ್ ಬೆಹೆರಾ, ಸಂತೋಷ್ ಕುಮಾರ್ ಹಾಗೂ ಅಂಕಿತ್ ಕುಮಾರ್, ಹವಲ್ದಾರ್ಗಳಾದ ವರದರಾಜುಲು, ಸೌಮ್ಯ ನಾಯಕ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.