ಬೆಡ್ಸ್‌ ವರ್ಕ್‌ ಕೊಠಡಿಗೆ ಬೆಂಕಿ. ಲಕ್ಷಾಂತರ ರೂ. ನಷ್ಟ.

ಕೋಟೇಶ್ವರ: ಕೋಟೇಶ್ವರ ಗ್ರಾ. ಪಂ. ಅಧೀನದ ಕಟ್ಟಡದಲ್ಲಿನ ಚಾಂಪಿಯನ್‌ ಬೆಡ್ಸ್‌ ವರ್ಕ್‌ ಕೊಠಡಿಗೆ ಎ. 21ರ ಮಧ್ಯರಾತ್ರಿ 9 ಮಂದಿಯ ಗುಂಪೊಂದು ಬೆಂಕಿ ಹಚ್ಚಿ 3 ಲಕ್ಷ ರೂ.ಗಳಿಗೂ ಹೆಚ್ಚಿನ ಮೌಲ್ಯದ ಸ್ವತ್ತುಗಳನ್ನು ನಾಶ ಮಾಡಿರುವುದಾಗಿ ಸಿರಾಜ್‌ ಕುಂದಾಪುರ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ

ಗ್ರಾ. ಪಂ. ಸನಿಹದ ಕಟ್ಟಡದಲ್ಲಿ ಖಾಸಿಂ ಸಾಹೇಬ್‌ ಹಾಗೂ ಅವರ ಮಕ್ಕಳು ಹಾಸಿಗೆ, ತಲೆದಿಂಬು, ಸೀಟ್‌ ಕುಶನ್‌ ಮುಂತಾದವುಗಳನ್ನು ನಿರ್ಮಿಸಿ ಮಾರಾಟ ವ್ಯವಹಾರ ನಡೆಸುತ್ತಿದ್ದರು. ಸೋಮವಾರ ತಡರಾತ್ರಿ ಕಿರಣ್‌, ಗಣೇಶ್‌, ಅಶೋಕ್‌, ಸಂತೋಷ್‌, ರಾಜೇಶ್‌ ಸಹಿತ 9 ಮಂದಿ ಸೇರಿ ಈ ಕೃತ್ಯ ಎಸಗಿರುವುದಾಗಿ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.

ಬೆಂಕಿ ಹೊತ್ತಿಕೊಂಡು ಸಮೀಪದ ಕೊಠಡಿಗಳಿಗೆ ವ್ಯಾಪಿಸುವ ಮೊದಲು ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಅದಾಗಲೇ ಬೆಲೆಬಾಳುವ ಸ್ವತ್ತುಗಳು ಸುಟ್ಟು ಭಸ್ಮವಾಗಿತ್ತು. ಕುಂದಾಪುರ ಪೊಲೀಸ್‌ ಹಾಗೂ ಅಗ್ನಿಶಾಮಕ ದಳದವರು ಕಾರ್ಯಪ್ರವೃತ್ತರಾದ್ದರಿಂದ ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿತು. ಕುಂದಾಪುರ ಡಿವೈಎಸ್‌ಪಿ ಸಿ. ಬಿ. ಪಾಟೀಲ್‌, ಸಿ. ಐ. ದಿವಾಕರ, ಎಸ್‌.ಐ. ಪ್ರಸಾದ ಕವರಿ ಅವರು ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com