ಗಂಗೊಳ್ಳಿ : ಇಲ್ಲಿನ ಮ್ಯಾಂಗನೀಸ್ ವಾರ್ಫ್ನ ಬೋಟ್ ಬಿಲ್ಡಿಂಗ್ ಸ್ಥಳದಲ್ಲಿ ದುರಸ್ತಿಗಾಗಿ ನಿಲ್ಲಿಸಿದ್ದ ಮೀನುಗಾರಿಕಾ ಟ್ರಾಲ್ ಬೋಟ್ನಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮ್ಯಾಂಗನೀಸ್ ವಾರ್ಫ್ನ ಬೋಟ್ ಬಿಲ್ಡಿಂಗ್ ಸ್ಥಳದಲ್ಲಿ ಸೋಮವಾರ ರಾತ್ರಿ ದೊಡ್ಡ ಶಬ್ದ ಕೇಳಿ ಬಂದಿದ್ದು, ಆಸುಪಾಸಿನ ಜನರು ಬಂದು ನೋಡಿದಾಗ ಈ ಸ್ಥಳದಲ್ಲಿ ರಿಪೇರಿಗಾಗಿ ನಿಲ್ಲಿಸಿದ್ದ ಮಲ್ಪೆಯ ಮತ್ಸೂÂàದ್ಯಮಿಯೊಬ್ಬರಿಗೆ ಸೇರಿದೆ ಎನ್ನಲಾದ ಸರ್ವೇಶ್ವರಿ ಬೋಟಿನ ಒಳಗೆ ಬೆಂಕಿ ಹೊತ್ತಿಕೊಂಡಿತ್ತು. ಇದೇ ಸಂದರ್ಭ ಬೆಂಕಿ ಹೊತ್ತಿಕೊಂಡ ಬೋಟ್ನ ಬಳಿಯಿಂದ ರಾಜು ಶೆಟ್ಟಿ ಎಂಬುವರು ಓಡಿ ಬಂದು ಅಲ್ಲಿಯೇ ಹತ್ತಿರವಿರುವ ಬೆ„ಕ್ನ್ನು ಸ್ಟಾರ್ಟ್ ಮಾಡಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. ರಾಜು ಶೆಟ್ಟಿಯವರ ತಲೆಗೆ ಗಾಯಗಳಾಗಿದ್ದು, ಯಾವುದೋ ದುರುದ್ದೇಶದಿಂದ ಇವರು ಹಾಗೂ ಇತರರು ಸೇರಿ ಈ ಕೃತ್ಯ ನಡೆಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಬೋಟಿಗೆ ಹೊತ್ತಿಕೊಂಡ ಬೆಂಕಿಯನ್ನು ಸ್ಥಳೀಯರು ನಂದಿಸುವ ಪ್ರಯತ್ನ ನಡೆಸಿದರು. ಬಳಿಕ ಅಗ್ನಿಶಾಮಕ ದಳದವರು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು. ಬೋಟಿನಲ್ಲಿ ಮೀನುಗಾರಿಕೆ ಸಮಯ ಮತ್ತು ಉಳಿದ ಕಾವಲು ಸಮಯ ಮೀನುಗಾರರು ವಾಸಿಸುತ್ತಾರೆ.
ಆದರೆ ಕಳೆದ ಕೆಲವು ದಿನಗಳಿಂದ ಮೀನುಗಾರಿಕೆ ಕಡಿಮೆಯಾಗಿರುವುದರಿಂದ ಈ ಬೋಟನ್ನು ದುರಸ್ತಿಗಾಗಿ ದಡದ ಮೇಲಕ್ಕೆ ಹಾಕಲಾಗಿತ್ತು ಎನ್ನಲಾಗಿದೆ. ಅದೃಷ್ಟವಶಾತ್ ಬೋಟಿನಲ್ಲಿ ಉಂಟಾದ ಶಬ್ದದಿಂದ ಭಾರಿ ಬೆಂಕಿ ಅನಾಹುತ ತಪ್ಪಿದಂತಾಗಿದೆ. ಈ ಬೋಟಿಗೆ ತಗುಲಿದ ಬೆಂಕಿಯ ತೀವ್ರತೆ ಇನ್ನಷ್ಟು ಹೆಚ್ಚಾಗುತ್ತಿದ್ದರೆ ಅಕ್ಕಪಕ್ಕದಲ್ಲಿ ನಿಲ್ಲಿಸಿದ್ದ ಹಾಗೂ ನಿರ್ಮಾಣ ಹಂತದಲ್ಲಿದ್ದ ಕೆಲವು ಬೋಟುಗಳು ಅಗ್ನಿಗಾಹುತಿಯಾಗುತ್ತಿತ್ತು. ಅಲ್ಲದೆ ಕೆಲವೇ ದೂರದಲ್ಲಿ ಡೀಸೆಲ್ ಬಂಕ್ಗೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇದ್ದಿತ್ತು. ಸುದ್ಧಿ ತಿಳಿದ ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ, ಗಂಗೊಳ್ಳಿ ಪೊಲೀಸ ಠಾಣೆಯ ಉಪನಿರೀಕ್ಷಕ ಗೋವರ್ಧನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುರುಚರಣ್ ಖಾರ್ವಿ ಎಂಬುವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kundapura news