ಕುಂದಾಪುರ: ಕೋಡಿಯ ಹಳವಳ್ಳಿ ಕಡಲಕಿನಾರೆಯ ಬಳಿ ಸಮುದ್ರದಲ್ಲಿ ಈಜಲು ತೆರಳಿದ ಸಂದರ್ಭದಲ್ಲಿ ಯುವಕನೋರ್ವ ನೀರಿನ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾದ ಘಟನೆ ಎ.3ರ ಸಂಜೆ ಸಂಭವಿಸಿದೆ.
ನೀರುಪಾಲಾದ ಯುವಕನನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ದ ಸೀಗೇ ಹಳ್ಳಿಯ ಮುನಿಶಾಮ ರೆಡ್ಡಿ (27) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ತೇಜಸ್ವಿನಿ ಎನ್ನುವ ಖಾಸಗಿ ಮೊಬೈಲ್ ಟವರ್ ಕ®ಸ್ಟ್ರಕ್ಷನ್ ಕಂಪನಿಯಲ್ಲಿ ಟೆಕ್ನಿಷಿಯನ್ ಕೆಲಸನಿರ್ವಹಿಸುತ್ತಿದ್ದು, ತನ್ನ ಸಹದ್ಯೋಗಿ ಸ್ನೇಹಿತರೊಂದಿಗೆ ಕುಂದಾಪುರ ಪರಿಸರದಲ್ಲಿ ನಿರ್ಮಾಣವಾಗುತ್ತಿರುವ ಮೊಬೈಲ್ ಟವರ್ ನಿರ್ಮಾಣ ಕಾರ್ಯಕ್ಕೆ ಕಳೆೆದ ಇಪ್ಪತ್ತು ¤ ದಿನಗಳ ಹಿಂದೆ ಬಂದಿದ್ದರು ಎನ್ನಲಾಗಿದೆ.
ಮುನಿಶ್ಯಾಮ ತನ್ನ ಸ್ನೇಹಿತರಾದ ಭರತ್, ಸಂತೋಷ್, ವೆಂಕಟೇಶ್ ಹಾಗೂ ಗೋಪಿನಾಥ್ರೊಂದಿಗೆ ಸಂಜೆ ಕೆಲಸ ಮುಗಿದ ನಂತರ ಕೋಡಿಯ ಹಳವಳ್ಳಿ ಸಮೀಪದಲ್ಲಿ ಸಮುದ್ರ ತೀರಕ್ಕೆ ಹೋಗಿದ್ದರು. ಅವರಲ್ಲಿ ಸಂತೋಷ್ ಕುಂಭಾಶಿಯ ನಿವಾಸಿಯಾಗಿದ್ದು ಉಳಿದವರು ಬೆಂಗಳೂರಿನ ನಿವಾಸಿಗಳಾಗಿದ್ದರು. ಮುನಿಶಾಮ, ಭರತ್ ಹಾಗೂ ವೆಂಕಟೇಶ್ ಅವರು ಈಜುವುದಕ್ಕಾಗಿ ಸಮುದ್ರಕ್ಕೆ ಇಳಿದಾಗ ಅಕಸ್ಮಿಕವಾಗಿ ಸಮುದ್ರದಲ್ಲಿ ಕಂಡುಬಂದ ಬಾರಿ ಅಲೆಯೊಂದು ಮುನಿಶಾಮನನ್ನು ಸಮುದ್ರದಾಳಕ್ಕೆ ಕೊಂಡೊಯ್ತು ಎನ್ನಲಾಗಿದೆ. ಅದೇ ಕಷ್ಟದಲ್ಲಿ ಎಲ್ಲರೂ ಕೂಗಿಕೊಂಡಾಗ ಸ್ಥಳೀಯರು ಆಗಮಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಕುಂಭಾಶಿಯಲ್ಲಿ ಮೊಬೈಲ್ ಟವರ್ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದು ಶುಕ್ರವಾರ ಕೆಲಸ ಮುಗಿಸಿ ಇವರೆಲ್ಲರೂ ಊರಿಗೆ ತೆರಳುವವರಿದ್ದರು.
ಮೃತ ಮುನಿಶಾಮ ರೆಡ್ಡಿ ಅವಿವಾಹಿತರಾಗಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹ ಶುಕ್ರವಾರ ಸಂಜೆ ಬೀಜಾಡಿ ಅಮವಾಸ್ಯೆ ಕಡು ಬಳಿ ಪತ್ತೆಯಾಗಿದೆ.