ಕುಂದಾಪುರ : ತಾಲೂಕಿನ ಕೊಳ್ಕೆಬೈಲು ಬಳಿ ಸಿದ್ಧಾಪುರ ಶಂಕರನಾರಾಯಣ ಮುಖ್ಯರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಬಸ್ಸೊಂದು ರಸ್ತೆಯ ಎಡಬದಿಯ ಮಣ್ಣು ದಿಣ್ಣೆಗೆ ಢಿಕ್ಕಿ ಹೊಡೆದ ಪರಿಣಾಮ ಬಸ್ಸು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ಕೆಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸ್ಸು ಸಿದ್ದಾಪುರದ ಕಡೆಯಿಂದ ಶಂಕರನಾರಾಯಣದತ್ತ ಸಾಗುತ್ತಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.