ಕಂದಾವರ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ ಆಕಸ್ಮಿಕ

ಕುಂದಾಪುರ: ಕೋಣಿ ಗ್ರಾಪಂ ವ್ಯಾಪ್ತಿಯ ಕಂದಾವರ ಗ್ರಾಮದಲ್ಲಿ ಕುಂದಾಪುರ ಪುರಸಭೆಯ ಅತ್ಯಾಧುನಿಕ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆನ್ನು ಬೆನ್ನಿಗೆ ಬೆಂಕಿ ಆಕಸ್ಮಿಕ ಘಟನೆಗಳು ನಡೆಯುತ್ತಿದ್ದು, ಸ್ಥಳೀಯ ನಿವಾಸಿಗಳು ಆತಂಕಿತರಾಗಿದ್ದಾರೆ. 

ಈ ವಾರದಲ್ಲಿ ಎರಡು ಬಾರಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು ಅಗ್ನಿಶಾಮಕ ಠಾಣೆಯ ಸಮಯೋಚಿತ ಕ್ರಮದಿಂದಾಗಿ ಸಂಭವೀಯ ತಪ್ಪಿದೆ. ಘಟಕಕ್ಕೆ ಹೊಂದಿಕೊಂಡು ಪರಿಶಿಷ್ಟ ಜಾತಿ ಜನಾಂಗಗಳ ಕಾಲೊನಿ, ಕೃಷಿ ಭೂಮಿ ವ್ಯಾಪಿಸಿಕೊಂಡಿದ್ದು ಸಂಬಂಧಿತರು ಎಚ್ಚರಿಕೆಯ ಕ್ರಮ ತೆಗೆದುಕೊಳ್ಳಬೇಕೆಂಬ ಕೂಗು ಎದ್ದಿದೆ. ತ್ಯಾಜ್ಯ ವಿಲೇವಾರಿ ಮಾಡಿ: ಘಟಕಕ್ಕೆ ಕುಂದಾಪುರ ನಗರ ವ್ಯಾಪ್ತಿಯ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಸಂಗ್ರಹಿತ ತ್ಯಾಜ್ಯಗಳ ತಕ್ಷಣ ವಿಲೇವಾರಿ ಕಾರ್ಯ ನಡೆಯುತ್ತಿಲ್ಲ. ಇದು ಅಪಾಯಕ್ಕೆ ಕಾರಣವಾಗಿದೆ. 

ಶುಕ್ರವಾರ ರಾತ್ರಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಅಪಾರ ತ್ಯಾಜ್ಯ ಸುಟ್ಟು ಹೋಗಿದೆ. ಅಗ್ನಿಶಾಮಕ ಹಾಗೂ ಸ್ಥಳೀಯರ ಸಮಯೋಚಿತ ಕ್ರಮದಿಂದ ಅಪಾಯ ತಪ್ಪಿದೆ. ಪದೇ ಪದೆ ಅಗ್ನಿಆಕಸ್ಮಿಕ ಇಲ್ಲಿ ಸಂಭವಿಸುತ್ತಿದ್ದು, ಸಂಬಂಧಿತರು ಗಮನಹರಿಸಬೇಕು ಎಂದು ಸ್ಥಳೀಯ ಗ್ರಾಪಂ ಸದಸ್ಯ ರಾಮಚಂದ್ರ ನಾವಡ ಆಗ್ರಹಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com