ಕುಂದಾಪುರ: ಇಲ್ಲಿಗೆ ಸಮೀಪದ ತಲ್ಲೂರು ರಾ.ಹೆ.66ರಲ್ಲಿ ಲಾರಿ, ಕಾರು ಹಾಗು ಮೊಪೆಡ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಮೊಪೆಡ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಫೆ.20ರಂದು ಸಂಜೆ ಸಂಭವಿಸಿದೆ.
ಮೃತಪಟ್ಟ ಮೊಪೆಡ್ ಸವಾರನನ್ನು ಬ್ರಹ್ಮಾವರ ಸಮೀಪದ ಪೇತ್ರಿ ನಿವಾಸಿ ರಮೇಶ್ (23) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಮಹಾರಾಷ್ಟ್ರದತ್ತ ಹೊಯಿಗೆಯನ್ನು ತುಂಬಿಕೊಂಡು ಸಾಗುತ್ತಿದ್ದ ಲಾರಿಯು ಕೇರಳದತ್ತ ಸಾಗುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದ ಸಂದರ್ಭದಲ್ಲಿ ಕಾರು ರಸ್ತೆಯ ತೀರಾ ಬಲಕ್ಕೆ ಚಲಿಸಿದ್ದರಿಂದ ಕುಂದಾಪುರದಿಂದ ಹೆಮ್ಮಾಡಿಯತ್ತ ಸಾಗುತ್ತಿದ್ದ ಮೊಪೆಡ್ಗೆ ಢಿಕ್ಕಿಹೊಡೆದಿತ್ತು. ಢಿಕ್ಕಿ ಹೊಡೆದ ಭೀಕರತೆಗೆ ಮೊಪೆಡ್ ಸವಾರ ಸಾವನ್ನಪ್ಪಿದ್ದಾರೆ.
ಮೃತಪಟ್ಟ ರಮೇಶ್ ಗುಜರಿ ವ್ಯಾಪಾರಿಯಾಗಿದ್ದು, ಬ್ರಹ್ಮಾವರದಿಂದ ಹೆಮ್ಮಾಡಿಯ ಸುಳೆÕಯ ತನ್ನ ಸಹೋದರಿಯ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಕಾರು ಹೈದರಾಬಾದ್ನಿಂದ ತ್ರಿವೆಂಡ್ರಮ್ಗೆ ಸಾಗುತ್ತಿದ್ದು, ಕಾರಿನಲ್ಲಿದ್ದ ಅಭಿಶೇಕ್ ಗಾಯಗೊಂಡಿದ್ದು ಸಹ ಸವಾರ ಗೌತಮ್ ಅಪಾಯದಿಂದ ಪಾರಾಗಿದ್ದಾರೆ.