ಹಕ್ಲಾಡಿ ಮತ್ತು ಆಲೂರು ಗ್ರಾಮಗಳ ಗಡಿಭಾಗ, ಕಟ್ಟಿನಮಕ್ಕಿಯಲ್ಲಿ ಕಳ್ಳರ ಹಾವಳಿ

ಹೆಮ್ಮಾಡಿ : ಹಕ್ಲಾಡಿ ಮತ್ತು ಆಲೂರು ಗ್ರಾಮಗಳ ಗಡಿಭಾಗವಾದ ಕಟ್ಟಿನಮಕ್ಕಿ-ನೂಜಾಡಿ ಕ್ರಾಸ್‌ನಲ್ಲಿ ರವಿವಾರ ಸಂಜೆ ತಂಡವೊಂದು ದೇವಲ್ಕುಂದದ ಒಂಟಿ ರಿಕ್ಷಾ ಚಾಲಕರೊಬ್ಬರನ್ನು ಅಡ್ಡಗಟ್ಟಿ ಪುಡಿಗಾಸು ದೋಚಿ ಕತ್ತಲಿನಲ್ಲಿ ಪರಾರಿಯಾದ ಘಟನೆ ವರದಿಯಾಗಿದ್ದು, ಪರಿಸರದಲ್ಲಿ ಭಯಭೀತಿ ಆವರಿಸಿದೆ.

ಕಟ್ಟಿನಮಕ್ಕಿ, ಹಕೂìರು ಕ್ರಾಸ್‌, ಹೊಯಿಗೆಹರ ಮೊದಲಾದ ಜನನಿಬಿಡ ಪ್ರದೇಶಗಳಲ್ಲಿ ಸಣ್ಣಪುಟ್ಟ ಕಳವು ಪ್ರಕರಣಗಳು ಇತ್ತೀಚೆಗೆ ಸದ್ದು ಮಾಡುತ್ತಿದ್ದು, ಕಳ್ಳರ ಪತ್ತೆಯಾಗದಿರುವುದು ಜನರಲ್ಲಿ ತೀರಾ ಆತಂಕ ಹುಟ್ಟಿಸಿದೆ. ತೀರಾ ಈಚೆಗಷ್ಟೇ ಕಟ್ಟಿನಮಕ್ಕಿ ಸಮೀಪ ನಾರ್ಕಳಿ ನಡುಬೆಟ್ಟು ನಂದಿಕೇಶ್ವರ ದೇವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳವು ಮಾಡಲಾಗಿದ್ದು ಕಳ್ಳರು ಸಾವಿರಾರು ರೂ. ಕದ್ದೊಯ್ದಿದ್ದರು. ಹಕೂìರು ಮಾಸ್ತಿಕಟ್ಟೆ ಮಾಸ್ತಿ ದೆ„ವಸ್ಥಾನ ಕಾಣಿಕೆಡಬ್ಬ ಕಳವು, ರಾತ್ರಿ ಹೊತ್ತು ಬೀಗ ಒಡೆದು ಅಂಗಡಿಮುಂಗಟ್ಟುಗಳಿಗೆ ನುಗ್ಗಿ ಹಣ ಮತ್ತು ಸೊತ್ತು ಕಳವು, ಹಕೂìರು ಕ್ರಾಸ್‌ನಲ್ಲಿ ಹಾಡಹಗಲೇ ಮಹಿಳೆಯೊಬ್ಬರ ಕರಿಮಣಿ ಸರ ಅಪಹರಣ, ಹಕೂìರು-ಹೆಮ್ಮುಂಜೆ ಕ್ರಾಸ್‌ ಬಳಿ ತಾರಿಬೇರುವಿನ ಯುವಕ ಯೋಗೀಶ್‌ ಸಾವು ಮೊದಲಾದ ಘಟನೆಗಳಿಂದಾಗಿ ಇದೀಗ ಇಲ್ಲಿನ ಪರಿಸರದಲ್ಲಿ ಸಂಜೆಯಾಗುತ್ತಿದ್ದಂತೆ ಜನಸಂಚಾರ ಅಸುರಕ್ಷಿತ ಎನಿಸಿಕೊಂಡಿದೆ.

ರಿಕ್ಷಾ ಬಾಡಿಗೆಗೆ ಬರುತ್ತಿಲ್ಲ: ಬಸ್ಸುಗಳ ಸಂಚಾರ ವಿರಳವಾಗಿದ್ದರಿಂದ ಈ ಪ್ರದೇಶಗಳಲ್ಲಿ ಸಂಜೆ ವೇಳೆ ಜನರು ಮನೆ ತಲುಪಲು ರಿಕ್ಷಾದವರನ್ನು ಕರೆದರೆ ಕಳ್ಳರ ಭೀತಿಯಿಂದಾಗಿ ಅವರು ಬಾಡಿಗೆಗೆ ಬರುತ್ತಿಲ್ಲ. ಒಂಟಿಯಾಗಿ ಸಂಚರಿಸುವುದು ಅಪಾಯಕಾರಿಯಾಗಿ ಪರಿಣಮಿಸಿದೆ.

ಬೆ„ಕ್‌ ಮತ್ತಿತರ ವಾಹನ ಸವಾರರು ಸಹಾ ಒಬ್ಬಂಟಿಯಾಗಿ ಸಂಚರಿಸಲು ಮತ್ತು ದಾರಿಹೋಕರಿಗೆ ಡ್ರಾಪ್‌ ಕೊಡಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಕಟ್ಟಿನಮಕ್ಕಿ, ಹೆಮ್ಮುಂಜೆ ಕ್ರಾಸ್‌, ಹಕೂìರು ಕ್ರಾಸ್‌, ಮಾಸ್ತಿಕಟ್ಟೆ, ಏಳುಸುತ್ತಿನಕೋಟೆ, ಹೊಯಿಗೆಹರ ಮೊದಲಾದ ಪ್ರದೇಶಗಳಿಗೆ ಪೊಲೀಸರ ನಿಯಮಿತ ಗಸ್ತು ಏರ್ಪಡಿಸಿ ಕಳ್ಳಕಾಕರ ಹಾವಳಿ ನಿಯಂತ್ರಿಸಿ ಸಾರ್ವಜನಿಕರ ಶಾಂತಿ-ನೆಮ್ಮದಿಯನ್ನು ಕಾಪಾಡುವಂತೆ ಜನತೆ ಆಗ್ರಹಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com