ಅಕ್ರಮ ಗಣಿಗಾರಿಕೆಗೆ ದಾಳಿ, ವಾಹನ ವಶ

ಬ್ರಹ್ಮಾವರ: ಬ್ರಹ್ಮಾವರ ಪರಿಸರದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಬುಧವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಠಾತ್ ದಾಳಿ ನಡೆಸಿದ್ದಾರೆ. ಹಂದಾಡಿ ಗ್ರಾಮದ ಮರ್ಬಿನಲ್ಲಿ ಅನಧಿಕೃತ ಮರಳು ಸಾಗಾಟ ಮಾಡುತ್ತಿದ್ದ 8 ಲಾರಿಗಳನ್ನು ಮತ್ತು ಮಟಪಾಡಿಯಲ್ಲಿ 2 ಲಾರಿಯನ್ನು, ಮುಖ್ಯ ರಸ್ತೆಯಲ್ಲಿ ಪರವಾನಗಿ ರಹಿತವಾದ ಶಿಲೆ ಕಲ್ಲು ಸಾಗಿಸುತ್ತಿದ್ದ 2 ಲಾರಿ ಹಾಗೂ ಮುರ ಕಲ್ಲು ಸಾಗಿಸುತ್ತಿದ್ದ 1 ಲಾರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ತಲಾ 6 ಸಾವಿರ ರೂ. ದಂಡ ವಿಧಿಸಲಾಯಿತು. 

ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಲತಾ ಕುಲಕರ್ಣಿ, ಬ್ರಹ್ಮಾವರ ವಿಶೇಷ ತಹಸೀಲ್ದಾರ್ ಮಧುಕರ್ ನಾಯಕ್, ಕಂದಾಯ ಅಧಿಕಾರಿ ಸುರೇಶ್ ರಾವ್ ಮತ್ತು ಸಿಬ್ಬಂದಿ ವರ್ಗ ಕಾರ‌್ಯಾಚರಣೆಯಲ್ಲಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com