ತೆಲುಗು ಚಿತ್ರರಂಗದ ಯುವತಾರೆ ಉದಯ್ ಕಿರಣ್ ಸಾವಿನ ಸುದ್ದಿಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಆಪ್ತ ಗೆಳೆಯರು ಸಾವಿನ ನೈಜ ಕಾರಣ ಜಗತ್ತಿಗೆ ತಿಳಿಯಬೇಕು ಉದಯ್ ಸಾವಿಗೆ ಮಾನಸಿಕ ಒತ್ತಡವೇ ಕಾರಣವಾದರೆ ಅವನಿಗೆ ಮಾನಸಿಕ ಒತ್ತಡ ಉಂಟು ಮಾಡಿದ್ದು ಯಾರು ಎಂಬುದು ಪ್ರಪಂಚಕ್ಕೆ ತಿಳಿಯಲಿ ಎಂದು ದುಃಖ ಆಕ್ರೋಶದಿಂದ ಹೇಳಿದ್ದಾರೆ. ಮೂಲಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಉದಯ್ ಅವರು ಗೆಳೆಯರೊಂದಿಗೆ ಫೋನ್ ಮೂಲಕ ಮಾತನಾಡಿದ್ದಾರೆ. ತಮ್ಮ ನೋವು ತೋಡಿಕೊಂಡಿದ್ದಾರೆ. 'Nakinka Okka Roju Kuda Bratakalani Ledu.' ( I don't want to live anymore) ಎಂದಿದ್ದಾರೆ ತಕ್ಷಣವೇ ಗೆಳೆಯರು ಪ್ರತಿಕ್ರಿಯೆ ನೀಡಿ ಕರೆ ಮಾಡಿದರೆ ಉದಯ್ ಫೋನ್ ಸೈಲಂಟ್ ಮೋಡ್ ಗೆ ಹೋಗಿ ಬಿಟ್ಟಿದ್ದೆ. ನಂತರ ಉದಯ್ ಅವರು ಪತ್ನಿ ವಿಶಿತಾಗೆ 'ಲವ್ ಯೂ' ಎಂದು ಸಂದೇಶ ಕಳಿಸಿದ್ದಾರೆ. ಮನೆಯಿಂದ ಹೊರಗಿದ್ದ ವಿಶಿತಾ ಅವರು 'ಲವ್ ಯೂ ಟೂ' ಎಂದು ಕಳಿಸಿದ್ದಾರೆ. ಪೊಲೀಸರ ಹೇಳಿಕೆ : ಉದಯ್ ಅವರು ಕೊನೆ ಫೋನ್ ಕಾಲ್ ಚೆನ್ನೈನಲ್ಲಿರುವ ಭೂಪಾಲ್ ಎಂಬುವವರಿಗೆ ಮಾಡಿದ್ದಾರೆ. ಸದ್ಯಕ್ಕೆ ಉದಯ್ ಅವರ ಮೊಬೈಲ್ ಫೋನ್ ಪೊಲೀಸರ ವಶದಲ್ಲಿದ್ದು ತನಿಖೆ ಮುಂದುವರೆದಿದ್ದಾರೆ. ಸಿನಿಮಾ ರಂಗದಲ್ಲಿ ಇತ್ತೀಚೆಗೆ ಸಿಗದ ಯಶಸ್ಸು, ಕುಟುಂಬದಲ್ಲಿನ ವಾತಾವರಣ, ಮಾನಸಿಕ ಒತ್ತಡದ ಕಾರಣ ಉದಯ್ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.