ಎಎನ್‌ಎಫ್ ಪೇದೆ ಅತ್ಮಹತ್ಯೆ

ಕುಂದಾಪುರ: ಇಲ್ಲಿನ ಅಮಾಸೆಬೈಲಿನ ಜಡ್ಡಿನಗದ್ದೆ ಎಂಬಲ್ಲಿ ನಕ್ಸಲ್‌ ನಿಗ್ರಹ ಪಡೆಯ ಸಿಬ್ಬಂದಿಯೋರ್ವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜನವರಿ 13 ರಂದು ರಾತ್ರಿ 11 ಗಂಟೆ ವೆಳೆಗೆ ನಡೆದಿದೆ.
  ಆತ್ಮಹತ್ಯೆ ಮಾಡಿಕೊಂಡ ಎಎನ್‌ಎಫ್ ಪೇದೆಯನ್ನು ಪೂತ್ತುರು ತಾಲೂಕಿನ ಬಳ್ಳೆರಿಕಟ್ಟೆಯ  ಅಲ್ಬರ್ಟ್‌ ಡಿಸೋಜಾ (35) ಎಂದು ಗುರುತಿಸಲಾಗಿದೆ. ಅಲ್ಬರ್ಟ್‌ ಅವರು 7ನೇ ಕೆ ಎಸ್‌ ಆರ್‌ಪಿ ಬೆಟಾಲಿಯನ್‌ ಮಂಗಳೂರು ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಬರ್ಟ್‌  ಅವರಿಗೆ ಮುಂದಿನ ತಿಂಗಳು ವಿವಾಹ ನಿಗದಿಯಾಗಿತ್ತು ಎಂದು ತಿಳಿದು ಬಂದಿದೆ.
   ಅತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನೆಂದು ಹೇಳಲು ಎಎನ್‌ಎಫ್ ಸಿಬ್ಬಂದಿಗಳು ನಿರಾಕರಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com