ಕುಂದಾಪುರ: ಕೋಡಿಯ ನಿವಾಸಿ ಕಿರಣ್ (22) ಅವರು ಮೈಸೂರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಡಿ.20ರಂದು ಊರಿಗೆ ಬಂದಿದ್ದರೂ ಸಹ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ ಎಂದು ಆತನ ತಂದೆ ಕುಂದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕತಾರ್ನಲ್ಲಿ ಉದ್ಯೋದಲ್ಲಿದ್ದ ಕಿರಣ್ ನ.14ರಂದು ಊರಿಗೆ ಬಂದಿದ್ದು ಡಿ.15ರಂದು ಮೈಸೂರಿಗೆ ಹೋಗಿ ಬರುತ್ತೇನೆ ಎಂದು ಹೇಳಿರುತ್ತಾನೆ. ಕಾಣೆಯಾದ ಕಿರಣ್ 5.5.ಅಡಿ ಸಪೂರ ಶರೀರ, ಕೋಲು ಮುಖ ಹೊಂದಿದ್ದು, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದಾನೆ. ಬಿಳಿ ಬಣ್ಣದ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಈತನ ಗುರುತು ಹಚ್ಚಿದವರು ಕೂಡಲೇ ಕುಂದಾಪುರ ಪೊಲೀಸ್ ಠಾಣೆ (08254 -230338)ನ್ನು ಸಂಪರ್ಕಿಸಲು ಕೋರಲಾಗಿದೆ.