ಕೊಲ್ಲೂರು: ಕೊಲ್ಲೂರು ಸಮೀಪದ ಹೊಸೇರಿ ನಿವಾಸಿ ಸಂದೀಪ್ ಭಟ್ (29) ಜ. 16ರ ಸಂಜೆ ಮನೆಯ ಪಕ್ಕಾಸಿಗೆ ಚೂಡಿದಾರದ ಬಟ್ಟೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ನೌಕರ ಸೀತಾರಾಮ ಅವರ ಪುತ್ರ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವೀರಭದ್ರ ದೇವರ ಗುಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದೀಪ್ ವೈಯಕ್ತಿಕ ಕಾರಣದಿಂದ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತರಿಗೆ ಮದುವೆಯಾಗಿ 1 ವರ್ಷವಾಗಿತ್ತು. ಭಕ್ತರೊಡನೆ ಅನ್ಯೋನ್ಯವಾಗಿದ್ದ ಅವರ ಕೃತ್ಯ ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದೆ.