ರಾಂಚಿ: ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ ರೇಪ್‌

ರಾಂಚಿ:  ನಗರದಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಗ್ಯಾಂಗ್‌ ರೇಪ್‌ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

16 ವರ್ಷ ಪ್ರಾಯದ ವಿದ್ಯಾರ್ಥಿನಿಯು ಭಾನುವಾರ ಕೋಚಿಂಗ್‌ ಕ್ಲಾಸ್‌ಗೆಂದು ಮನೆಯಿಂದ ಹೋಗಿದ್ದಳು. ಅಲ್ಲಿಂದ ರಾತು ರಸ್ತೆಯಲ್ಲಿನ ದೇವಸ್ಥಾನವೊಂದಕ್ಕೆ ಆಕೆ ಒಬ್ಬ ವ್ಯಕ್ತಿಯೊಂದಿಗೆ ಹೋಗಿದ್ದಳು. 

ಆಗ ಮಾರ್ಗ ಮಧ್ಯೆ ಅಛಾನಕ್‌ ಆಗಿ ಸುಮಾರು 24-25 ವರ್ಷ ಪ್ರಾಯದ ಎಂಟು ಮಂದಿ ಇವರನ್ನು ಅಡ್ಡಗಟ್ಟಿ ಬಲವಂತವಾಗಿ ಪಕ್ಕದ ಸ್ಥಳಕ್ಕೆ ಒಯ್ದು ಅಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರೆಂದು ವರದಿಯಾಗಿದೆ.

ತನ್ನ ಮೇಲಿನ ರೇಪ್‌ ಅನ್ನು ಆರೋಪಿಗಳಲ್ಲಿ ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ ಮತ್ತು ಎಂಎಂಎಸ್‌ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿರುವ ಹುಡುಗಿಯು ತಿಳಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿ ಈ ತನಕ ಯಾರನ್ನೂ ಬಂಧಿಸಲಾಗಿಲ್ಲ. ಹುಡುಗಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com