ಗೇರು ಪ್ಲಾಂಟೇಶನ್‌ಗೆ ಬೆಂಕಿ

ಬೈಂದೂರು: ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಎರಡೂ ದಿಕ್ಕಿನಲ್ಲಿರುವ ಖಾಸಗಿ ಗೇರು ಪ್ಲಾಂಟೇಶನ್‌ಗೆ ಸೋಮವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ ಹತ್ತಾರು ಎಕ್ರೆ ಗೇರು ಪ್ಲಾಂಟೇಶನ್ ಬೆಂಕಿಯ ಕೆನ್ನಾಲಿಗೆ ತುತ್ತಾಗಿದೆ. 

ಮಧುಕರ ಪೂಜಾರಿ ಕೃಷ್ಣ ಒಡೆತನದ ಮೋವಡಿ ಪ್ಲಾಂಟ್ ಹಾಗೂ ಸಂತೋಷ ಶೆಟ್ಟಿ ಅವರ ಗುಹೇಂದ್ರ ಪ್ಲಾಂಟ್‌ಗೆ ಸೋಮವಾರ ಮಧ್ಯಾಹ್ನ ಹೊತ್ತಿಗೆ ಆಕಸ್ಮಿಕವಾಗಿ ಏಕ ಕಾಲದಲ್ಲಿ ಬೆಂಕಿ ತಗುಲಿದೆ. ಇದರಿಂದ ಪ್ರತ್ಯೇಕವಾದ ಎರಡೂ ಪ್ಲಾಂಟ್‌ಗಳಲ್ಲಿದ್ದ ಅಕೇಶಿಯಾ ಹಾಗೂ ಗೇರು ಮರಗಳಿಗೆ ಹಾನಿಯಾಗಿದೆ. ರಸ್ತೆಯ ಎರಡೂ ಕಡೆ ಏಕ ಕಾಲದಲ್ಲಿ ಬೆಂಕಿ ಬಿದ್ದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಇದೊಂದು ಪೂರ್ವಯೋಜಿತ ಕೃತ್ಯವಾಗಿದ್ದು, ಹಲವು ಬಾರಿ ಇದೇ ಸ್ಥಳದಲ್ಲಿ ಕಿಡಿಗೇಡಿಗಳು ಈ ರೀತಿಯ ವರ್ತನೆ ನಡೆಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 

ಬೆಂಕಿಯ ತೀವ್ರತೆ ಹೆಚ್ಚಾದ ಪರಿಣಾಮ ದಟ್ಟ ಹೊಗೆ ಹೆದ್ದಾರಿ ಯನ್ನು ವ್ಯಾಪಿಸಿ ಸುಗಮ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಹೆದ್ದಾರಿ ಸಮೀಪದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿ ತಗುಲುವ ಪರಿಸ್ಥಿತಿ ಇದ್ದಾಗ ಸ್ಥಳದಲ್ಲಿದ್ದ ಸ್ಥಳೀಯರು ಸಮಯ ಪ್ರಜ್ಞೆ ಮೆರೆದು ಬೆಂಕಿಯನ್ನು ನಂದಿಸಿ ಅಪಾಯವನ್ನು ತಡೆದಿದ್ದಾರೆ. ಸ್ಥಳಕ್ಕಾಗಮಿಸಿದ ಕುಂದಾಪುರ ಅಗ್ನಿಶಾಮಕ ದಳದವರು ಬೆಂಕಿ ಯನ್ನು ಸಂಪೂರ್ಣ ಹತೋಟಿಗೆ ತರುವಲ್ಲಿ ಯಶಸ್ವಿಯಾದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com