ಸಿದ್ದಾಪುರ: ಗೋಳಿಯಂಗಡಿ ಹೈಕಾಡಿ ನಡುವಿನ ಜೆಡ್ಡು ಎಂಬಲ್ಲಿ ಹೆಬ್ರಿಯಿಂದ ಕುಂದಾಪುರದ ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ಸೊಂದು ಹಾಲಾಡಿಯಿಂದ ಗೋಳಿಯಂಗಡಿಗೆ ಬರುತ್ತಿದ್ದ ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ. ಬೈಕ್ ಸವಾರ ರಾಘವೇಂದ್ರ ನಾಯ್ಕ(25) ಎಂದು ಗುರುತಿಸಲಾಗಿದೆ.
ಮೃತರು ಅವಿವಾಹಿತರಾಗಿದ್ದು, ಹಿಲಿಯಾಣ ಗ್ರಾಮದ ಆಮ್ರಕಲ್ಲು ಹತ್ತಿರ ದಾಸನಕೊಡ್ಲು ನಿವಾಸಿಯಾಗಿರುತ್ತಾರೆ. ಅವರು ಹಿಂದೆ ಅಂಗಡಿ ಮಾಡಿಕೊಂಡಿದ್ದು, ಈಗ ಖಾಸಗಿ ಒಬ್ಬರೊಂದಿಗೆ ರೈಟರ್ ಕೆಲಸ ನಿರ್ವಹಿಸುತ್ತಿದ್ದರು. ತಂದೆ ನರಸಿಂಹ ನಾಯ್ಕ, ತಾಯಿ ಪಾರ್ವತಿ ಬಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.