ಗಂಗೊಳ್ಳಿ : ಬಂದರಿನಿಂದ 18 ಮಾರು ಆಳದ ಸಮುದ್ರದಲ್ಲಿ ಮೀನುಗಾರಿಎಕ ನಡೆಸುತ್ತಿರುವ ವೇಳೆಯಲ್ಲಿ ಅಕಸ್ಮಿಕವಾಗಿ ಬೋಟಿನಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದು ಹಕ್ಲಾಡಿ ತೊಪು ಜೋಗ ಮೊಗವೀರ ಮೃತಪಟ್ಟಿದ್ದಾರೆ.
ಬಂದರಿನಿಂದ ಬೋಟಿನಲ್ಲಿ ಸುಮಾರು ಹದಿನೇಳು ಮಂದಿ ಸೇರಿ ಮೀನುಗಾರಿಕೆಗೆ ತೆರಳಿದಾಗ ಬೋಟಿನ ಹಿಂಬದಿ ನಿಂತುಕೊಂಡಿದ್ದಾಗ ಗಾಳಿಯ ಹೊಡೆತಕ್ಕೆ ದೋಣಿ ಮೆಲೇ ಕೆಳಕ್ಕೆ ಆದಾಗ ಈ ದುರ್ಘಟನೆ ಸಂಭವಿಸಿದ್ದು, ತಕ್ಷಣ ಇತರ ಮೀನುಗಾರರ ಸಹಾಯದಿಂದ ಅವರನ್ನು ಮೇಲೆತ್ತಿ ಕುಂದಾಪುರ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.