ಕುಂದಾಪುರ: ನಗರದ ಹಂಗಳೂರು ಬಳಿ ಟೆಂಪೋವೊಂದು ಸೈಕಲ್ಗೆ ಢಿಕ್ಕಿಹೊಡೆದ ಪರಿಣಾಮ ಸೈಕಲ್ ಸವಾರ ಹಂಗಳೂರಿನ ನಿವಾಸಿ ರಾಬರ್ಟ್ ಡಿಸೋಜಾ (55) ಮೃತಪಟ್ಟಿದ್ದಾರೆ.
ಹಂಗಳೂರು ಗ್ರಾ.ಪಂ.ರಸ್ತೆಯಿಂದ ರಾ.ಹೆ.ಯತ್ತ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವೃತ್ತಿಯಲ್ಲಿ ಟೈಲರ್ ಆಗಿರುವ ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.