ಬೆಂಗಳೂರು-ನಾಂದೇಡೆ ಎಕ್ಸ್`ಪ್ರೆಸ್ ರೈಲಿನಲ್ಲಿ ಅಗ್ನಿ ದುರಂತ. 23ಕ್ಕೂ ಅಧಿಕ ಮಂದಿ ದುರ್ಮರಣ

ಅನಂತಪುರಂ: ಆಂಧ್ರಪ್ರದೇಶದ ಪುಟ್ಟಪರ್ತಿ ಬಳಿ ಭೀಕರ ರೈಲು ದುರಂತದಲ್ಲಿ 26ಕ್ಕೂ ಹೆಚ್ಚು ಜನರು ಸಜೀವ ದಹನವಾಗಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ. ಬೆಂಕಿ ಅವಘಡಕ್ಕೀಡಾದ ಈ ಬೆಂಗಳೂರು-ನಾಂದೇಡ್ ಎಕ್ಸ್'ಪ್ರೆಸ್ ರೈಲಿನಲ್ಲಿ 72 ಮಂದಿ ಪ್ರಯಾಣಿಸುತ್ತಿದ್ದರೆನ್ನಲಾಗಿದೆ.

ಪುಟ್ಟಪರ್ತಿ ರೈಲು ನಿಲ್ದಾಣದ ಸಮೀಪವಿರುವ ಕೊತ್ತಚೆರುವು ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗೆ 3:30ಕ್ಕೆ ಈ ದುರಂತ ಸಂಭವಿಸಿದೆ. ರೈಲಿನಲ್ಲಿದ್ದ ಎರಡು ಎಸಿ ಬೋಗಿಗಳ ಪೈಕಿ ಬಿ1 ಬೋಗಿಗೆ ಬೆಂಕಿ ತಗುಲಿದೆ. ಈ ಬೋಗಿಯಲ್ಲಿ ಸುಖ ನಿದ್ರೆಯಲ್ಲಿದ್ದ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಬೆಂಕಿ ಇತರ ಬೋಗಿಗಳಿಗೆ ಹರಡದಂತೆ ನೋಡಿಕೊಳ್ಳಲಾಗಿದ್ದು, ಬೆಳಕ್ಕೆ 5 ಗಂಟೆ ಹೊತ್ತಿಗೆ ಬೆಂಕಿ ನಂದಿಸುವ ಕಾರ್ಯ ಬಹುತೇಕ ಯಶಸ್ವಿಯಾಗಿದ್ದರೂ ಎಸಿ ಬೋಗಿಯಲ್ಲಿದ್ದ ಪ್ರಯಾಣಿಕರ ಜೀವ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ.

ರೈಲಿನಲ್ಲಿದ್ದ ಕರ್ನಾಟಕದ ಹಲವು ಜನರೂ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಸಾವಿಗೀಡಾದವರಲ್ಲಿ ಮಕ್ಕಳೂ ಸೇರಿದ್ದಾರೆನ್ನಲಾಗಿದೆ. ರೈಲಿಗೆ ಬೆಂಕಿ ತಗುಲಲು ಏನು ಕಾರಣವೆಂಬುದು ಸ್ಪಷ್ಟ ಕಾರಣ ಸಿಕ್ಕಿಲ್ಲ. ಒಂದು ಮಾಹಿತಿ ಪ್ರಕಾರ ಶಾರ್ಟ್ ಸರ್ಕ್ಯೂಟ್'ನಿಂದ ಬೆಂಕಿ ತಗುಲಿರುವ ಸಾಧ್ಯತೆ ಇದೆ.

ಗಾಯಾಳುಗಳನ್ನು ಧರ್ಮಾವರಂ, ಪೆನುಕೊಂಡ ಮತ್ತು ಪುಟ್ಟಪರ್ತಿಯಲ್ಲಿರುವ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಸುಟ್ಟುಕರಕಲಾದ ದೇಹಗಳು...
ಎಸಿ ಬೋಗಿಯಲ್ಲಿದ್ದ ಪ್ರಯಾಣಿಕರ ಶವಗಳು ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿವೆ. ಅಲ್ಲದೇ, ಬೋಗಿಯ ಹೊರಭಾಗದಲ್ಲಿ ಅಂಟಿಸಲಾಗಿದ್ದ ಪ್ರಯಾಣಿಕರ ಪಟ್ಟಿಯೂ ಸುಟ್ಟುಹೋಗಿರುವುದರಿಂದ ಪ್ರಯಾಣಿಕರ ವಿವರಗಳೂ ಸದ್ಯದ ಮಟ್ಟಿಗೆ ಅಲಭ್ಯವಾಗಿವೆ...

ದುರಂತಕ್ಕೀಡಾದ ಬೆಂಗಳೂರು-ನಾಂದೇಡ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರ ವಿವರ

ಬೆಂಕಿಗಾಹುತಿಯಾದ ಬಿ-1 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದವರ ವಿವರ: 

ಡಾ. ಐ.ಎಸ್. ಪಾಟೀಲ್ - ಬೆಂಗಳೂರಿನಿಂದ ರಾಯಚೂರಿಗೆ ತೆರಳುತ್ತಿದ್ದರು
ಪ್ರಭು - ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದರು
ಶ್ರೀಲತಾ - ಬೆಂಗಳೂರಿನಿಂದ ಅನಂತಪುರಕ್ಕೆ ತೆರಳುತ್ತಿದ್ದರು
ರತಿ, ಪ್ರೇಮಲತಾ - ಬೆಂಗಳೂರಿನಿಂದ ನಾಂದೇಡ್ಗೆ ತೆರಳುತ್ತಿದ್ದರು
ದಲ್ವಿಂದರ್ ಕೌರ್ - ಬೆಂಗಳೂರಿನಿಂದ ನಾಂದೇಡ್ಗೆ ತೆರಳುತ್ತಿದ್ದರು
ಸಂಜೀವ್ ಕೋಲೂರ್ - ಬೆಂಗಳೂರಿನಿಂದ ಯಾದಗಿರಿಗೆ ತೆರಳುತ್ತಿದ್ದರು
ಕವಿತಾ ನಾಗ್ರೆ - ಬೆಂಗಳೂರಿನಿಂದ ಪುಟ್ಟಪರ್ತಿಗೆ ತೆರಳುತ್ತಿದ್ದರು
ಈಶ್ವರ್ ನಾಗ್ರೆ - ಬೆಂಗಳೂರಿನಿಂದ ಪುಟ್ಟಪರ್ತಿಗೆ ತೆರಳುತ್ತಿದ್ದರು
ಜೂಹಿ ನಾಗ್ರೆ - ಬೆಂಗಳೂರಿನಿಂದ ಪುಟ್ಟಪರ್ತಿಗೆ ತೆರಳುತ್ತಿದ್ದರು
ಕೃಷ್ಣಮೂರ್ತಿ - ಬೆಂಗಳೂರಿನಿಂದ ರಾಯಚೂರಿಗೆ ತೆರಳುತ್ತಿದ್ದರು
ಬಲಬೀರ್ ಕೌರ್ - ಬೆಂಗಳೂರಿನಿಂದ ಬೀದರ್ಗೆ ತೆರಳುತ್ತಿದ್ದರು
ಕಮಲ್ದೀಪ್ ಸಿಂಗ್ - ಬೆಂಗಳೂರಿನಿಂದ ಬೀದರ್ಗೆ ತೆರಳುತ್ತಿದ್ದರು
ರಮಾನಂದಂ - ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದರು
ವಿವೇಕ್ -ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದರು
ಇಬ್ರಾಹಿಂ ರಾಹಿ - ಯಶವಂತಪುರದಿಂದ ರಾಯಚೂರಿಗೆ ತೆರಳುತ್ತಿದ್ದರು
ಡಾ.ಅಸ್ರಾ - ಯಶವಂತಪುರದಿಂದ ರಾಯಚೂರಿಗೆ ತೆರಳುತ್ತಿದ್ದರು
ಸುಧಾ -ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದರು
ಖಾನ್ದೊಂಬಾ ಕುಲ್ಕರ್ - ಬೆಂಗಳೂರಿನಿಂದ ತಾಂದೂರ್`ಗೆ ತೆರಳುತ್ತಿದ್ದರು
ಅನಿರುದ್ಧ ಎನ್. ಕೌಲ್ - ಬೆಂಗಳೂರಿನಿಂದ ನಾಂದೇಡ್ಗೆ ತೆರಳುತ್ತಿದ್ದರು
ರಾಹುಲ್ - ಬೆಂಗಳೂರಿನಿಂದ ರಾಯಚೂರಿಗೆ ತೆರಳುತ್ತಿದ್ದರು
ಕೆ.ಎಸ್.ಎಸ್. ಪ್ರಭು - ಬೆಂಗಳೂರಿನಿಂದ ತೆರಳುತ್ತಿದ್ದರು
ಡಾ.ಶಿವರಾಜ್ - ಬೆಂಗಳೂರಿನಿಂದ ಬೀದರ್ ತೆರಳುತ್ತಿದ್ದರು
ರಮೇಶ್. ಕೆ.ಆರ್ - ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದರು
ಅಶೋಕನ್ - ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದರು
ಅವಿನಾಶ್ ರೆಡ್ಡಿ - ಬೆಂಗಳೂರಿನಿಂದ ಅನಂತಪುರಕ್ಕೆ ತೆರಳುತ್ತಿದ್ದರು
ಸೌಮ್ಯ ರೆಡ್ಡಿ - ಬೆಂಗಳೂರಿನಿಂದ ಅನಂತಪುರಕ್ಕೆ ತೆರಳುತ್ತಿದ್ದರು
ಮಾನ್ಸಿಂಗ್ - ಬೆಂಗಳೂರಿನಿಂದ ಬೀದರ್ಗೆ ತೆರಳುತ್ತಿದ್ದರು
ಎನ್. ಕಿಶೋರ್ ಕುಮಾರ್ - ಗುಂಟೂರಿಗೆ ತೆರಳುತ್ತಿದ್ದರು
ವಿಟ್ಜಿತಾ - ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದರು
ರಾಮಮೂರ್ತಿ.ಆರ್ - ರಾಯಚೂರಿಗೆ ತೆರಳುತ್ತಿದ್ದರು
ನಾಗೇಶ್ ರಾವ್- ಬೆಂಗಳೂರಿನಿಂದ ರಾಯಚೂರಿಗೆ ತೆರಳುತ್ತಿದ್ದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com