ಹಂಗಳೂರು ವಿವಾದಿತ ಭೂಮಿ ಸರ್ವೆ, ಮಾತಿನ ಚಕಮಕಿ

ಕುಂದಾಪುರ: ಹಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಲಾಡಿ ಎಂಬಲ್ಲಿ ಪಂಚಾಯಿತಿಗೆ ದಾನವಾಗಿ ಕೊಟ್ಟಿರುವ ಭೂಮಿಯ ಸುತ್ತ ಎದ್ದಿರುವ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ತಹಸೀಲ್ದಾರ ಗಾಯತ್ರಿ ಎನ್.ನಾಯಕ ನೇತತ್ವದಲ್ಲಿ ಬೆಳಗ್ಗೆ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಕೆಲಹೊತ್ತು ಪರಸ್ಪರ ಮಾತಿನ ಚಕಮಕಿ ನಡೆದಿದ್ದು ತಹಸೀಲ್ದಾರರ ದಿಟ್ಟ ನಡೆಯಿಂದಾಗಿ ಪರಿಸ್ಥಿತಿ ತಿಳಿಯಾಯಿತು. 

ನಾರಾಯಣ ರಾವ್ ಎಂಬವರು ಹಂಗಳೂರು ಪಂಚಾಯಿತಿಗೆ ದಾನವಾಗಿ ನೀಡಿರುವ 1.36 ಎಕರೆ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಅಡೆತಡೆ ಉಂಟಾಗಿದೆ ಎಂದು ವಿವಾದ ಸಷ್ಟಿಯಾಗಿತ್ತು. ಸ್ಥಳೀಯ ರಸ್ತೆ ಉಳಿಸಿ ಹೋರಾಟ ಸಮಿತಿ ತಿಯಿಂದ ಹೋರಾಟ ನಡೆಸಲಾಗಿತ್ತು. ರಸ್ತೆಗೆ ತಾಗಿಕೊಂಡು ಅಳವಡಿಸಿದ ಕುಡಿಯುವ ನೀರಿನ ಪೆಪ್‌ಲೆನ್ ಕಿತ್ತು ಹಾಕಿದ್ದ ಪ್ರಸಂಗದ ವಿರುದ್ಧ ಎದ್ದ ವಿವಾದ ದೊಡ್ಡ ಸ್ವರೂಪ ಪಡೆದುಕೊಂಡಿತ್ತು. 

ದಾನವಾಗಿ ಕೊಟ್ಟಿರುವ ಭೂಮಿ ಹಾಗೂ ಭೂ ನ್ಯಾಯ ಮಂಡಳಿ ಫಲಾನುಭವಿಯೊಬ್ಬರಿಗೆ ಮಂಜೂರುಗೊಳಿಸಿದ ಭೂಮಿಯ ನಡುವೆ ಗೊಂದಲ ಎರ್ಪಟ್ಟಿದ್ದರಿಂದ ಸರ್ವೆ ಕಾರ್ಯಕ್ಕೆ ತೊಂದರೆಯಾಗಿತ್ತು. ಸಾರ್ವಜನಿಕರ ಆಗ್ರಹ, ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಮನವಿಯ ಮೇರೆಗೆ ಶುಕ್ರವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ ಗಾಯತ್ರಿ ಎನ್.ನಾಯಕ್ ಸ್ಥಳ ಪರಿಶೀಲನೆ ನಡೆಸಿ ಸರ್ವೆ ನಡೆಸಲು ಅಕಾರಿಗಳಿಗೆ ಸೂಚನೆ ನೀಡುತ್ತಿರುವಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಲು ಮುಂದಾದರು. ಆಕ್ಷೇಪಿಸುವವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ತಹಸೀಲ್ದಾರರು ನಮ್ಮ ಕಾರ್ಯಕ್ಕೆ ಅಡ್ಡಿಪಡಿಸಿದರೆ ಸಹಿಸಲಾಗದು. ನಿಮ್ಮಳಗೆ ವಿವಾದ ಇದ್ದರೆ ನೀವೇ ಬಗೆಹರಿಸಿಕೊಳ್ಳಿ. ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಲು ಸರಿಯಲ್ಲ ಎಂದು ತಾಕೀತು ಮಾಡಿದರು. ಬಳಿಕ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ತಾಲೂಕು ಪಂಚಾಯಿತಿ ಸದಸ್ಯ ಮಂಜು ಬಿಲ್ಲವ, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಣ ಪೂಜಾರಿ, ಶೇಖರ ಪೂಜಾರಿ, ಆನಂದ ಪೂಜಾರಿ, ಸ್ಥಳೀಯ ಗಣ್ಯರಾದ ಚಂದ್ರಶೇಖರರಾವ್, ರಸ್ತೆ ಉಳಿಸಿ ಹೋರಾಟ ಸಮಿತಿ ಸಂಚಾಲಕ ನಿತ್ಯಾನಂದ ಶೇರೆಗಾರ್ ಮೊದಲಾದವರು ಈ ಸಂದರ್ಭ ಇದ್ದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com