ತೆಕ್ಕಟ್ಟೆ: ಗ್ರಾ.ಪಂ. ವ್ಯಾಪ್ತಿಯ ಗೊಂಟ್ರಬೆಟ್ಟು ಬಳಿ ಪುಟ್ಟಣ ಪೂಜಾರಿ ಅವರ ಮನೆಯ ತೆಂಗಿನ ಮರದಲ್ಲಿದ್ದ ಹೆಜ್ಜೇನು ಕಡಿದ ಪರಿಣಾಮವಾಗಿ ನಾಲ್ವರು ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.
ಗಾಯಗೊಂಡವರನ್ನು ಲಕ್ಷ್ಮಿ (60), ಉಮೇಶ್ (29), ರವಿ( 21), ಸುಧಾಕರ (22)ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಲಕ್ಷಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ.
ತೆಂಗಿನ ಮರದ ಜೇನುಗೂಡಿಗೆ ಹದ್ದು ಹೊಡೆದ ಪರಿಣಾಮ ಹೆಜ್ಜೇನುಗಳು ಕಡಿತ ಉಂಟಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.