ಕುಂದಾಪುರ : 20ಕ್ಕೂ ಹೆಚ್ಚು ಯುವತಿಯರಿಗೆ ಮದುವೆಯಾಗುವುದಾಗಿ ಹೇಳಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿ ತಲೆ ಮರೆಸಿಕೊಂಡಿರುವ ರಿಕ್ಷಾ ಚಾಲಕನಿಗಾಗಿ ಕುಂದಾಪುರ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಯನ್ನು ಮೂಡುಬಗೆ ಅಂಪಾರು ನಿವಾಸಿಯಾದ 25 ವರ್ಷ ಪ್ರಾಯದ ವಿಘ್ನೇಶ್ವರ ಎಂದು ಹೇಳಲಾಗಿದೆ.
ಈತನ ಬಗ್ಗೆ ತಿಳಿದ ಸ್ಥಳೀಯರ ಅಭಿಪ್ರಾಯದಂತೆ ಈತ ತನ್ನ ಮಾತಿನಮೋಡಿ ಮತ್ತು ದೇಹ ಸೌಂದರ್ಯವನ್ನೇ ದಾಳವನ್ನಾಗಿಸಿ 20 ಕ್ಕೂ ಹೆಚ್ಚು ಯುವತಿಯರಿಗೆ ಮದುವೆಯಾಗುವುದಾಗಿ ಮಾತು ನೀಡಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದಾನೆ ಎನ್ನಲಾಗುತ್ತಿದೆ.
ಈತನಿಂದ ವಂಚನೆಗೊಳಗಾದ ಕುಂದಾಪುರ ಮಳಿಗೆಯೊಂದರಲ್ಲಿ ಸೇಲ್ಸ್ಗರ್ಲ್ ಆಗಿ ಕೆಲಸ ನಿರ್ವಹಿಸುತ್ತಿರುವ ಆನಗಳ್ಳಿಯ ನಿವಾಸಿಯಾದ ಯುವತಿಯೊರ್ವಳು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ನನಗೆ 2 ವರ್ಷಗಳ ಹಿಂದೆಕಾರ್ಯಕ್ರಮವೊಂದರಲ್ಲಿ ವಿಘ್ನೇಶ್ವರನ ಭೇಟಿಯಾಗಿತ್ತು ನಂತರ ಪೀತಿಯ ನಾಟಕವಾಡಿದ ಆತ ಮದುವೆಯಾಗುವುದಾಗಿ ಮಾತು ನೀಡಿ ನನ್ನನ್ನು ಹಲವಾರು ಬಾರಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಹೇಳಿಕೊಂಡಿದ್ದಾಳೆ.
ಕಳೆದ 5 ತಿಂಗಳ ಹಿಂದೆ ಹಟ್ಟಿಯಂಗಡಿಯ ಬಳಿಯ ಪ್ರದೇಶವೊಂದರಲ್ಲಿ ಇವರಿಬ್ಬರು ಜೊತೆಯಾಗಿರುವುದನ್ನು ಸ್ಥಳೀಯರು ಗಮನಿಸಿ ಇವರಿಬ್ಬರನ್ನು ಪೊಲೀಸರಿಗೊಪ್ಪಿಸಿದ್ದರು. ಆದರೆ ಪೊಲೀಸ್ ಠಾಣೆಯಲ್ಲಿ ಯುವತಿ ವಿಘ್ನೇಶ್ವರನನ್ನು ಮದುವೆಯಾಗಿ ಹೇಳಿ ಕೊಂಡಿದ್ದಳು.
'ನಾನು ಮದುವೆಯ ಬಗ್ಗೆ ಕೇಳಿದಾಗ ಆತ ಪ್ರತಿ ಬಾರಿಯೂ ಮುಂದೂಡುತ್ತಿದ್ದ ,ಅಂತಿಮವಾಗಿ ನಾನು ಕಠಿಣ ನಿಲುವು ತಳೆದು ಮದುವೆಯ ಬಗ್ಗೆ ಒತ್ತಾಯ ಮಾಡಿದಾಗ ನಾನು ನಿನ್ನನ್ನು ಮುದುವೆಯಾಗುವುದಿಲ್ಲ ಎಂದು ನನ್ನನ್ನು ಹೂಡೆದು ನನ್ನ ಮೇಲೆ ಬಲಾತ್ಕಾರ ಮಾಡಿದ್ದಾನೆ' ಎಂದು ಯುವತಿಯ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾಳೆ.
ಪೊಲೀಸರು ಈಗಾಗಲೇ ಯುವತಿಯ ವೈದ್ಯಕೀಯ ಪರೀಕ್ಷೆ ಮಾಡಿಸಿ ಅತ್ಯಾಚಾರ ನೆಡೆಸಿದ್ದನ್ನು ಧೃಡಪಡಿಸಿದ್ದಾರೆ.
ಕುಂದಾಪುರ ಪೊಲೀಸರು ವಿಘ್ನೇಶ್ವರನ ಮೇಲೆ ಅತ್ಯಾಚಾರ ಮತ್ತು ವಂಚನೆಯ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿಯವರೆಗೆ ಈತನ ಪತ್ತೆಯಾಗಿಲ್ಲ .