ಗೂಡ್ಸ್‌ ಟೆಂಪೋ ಉರುಳಿ ಅಯ್ಯಪ್ಪ ಸ್ವಾಮಿ ವ್ರತಧಾರಿ ಸಾವು

ಕೊಲ್ಲೂರು : ಮಾರಣಕಟ್ಟೆ ಸಮೀಪದ ಚಿತ್ತೂರು ಬಳಿ ಗೂಡ್ಸ್‌ ಟೆಂಪೋ ಮಗುಚಿ ಬಿದ್ದು ಅಯ್ಯಪ್ಪ ಸ್ವಾಮಿ ವ್ರತಧಾರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆಯಿತು.

ತಲ್ಲೂರು ನಿವಾಸಿಯಾದ ಗುರುರಾಜ ಆಚಾರ್ಯ (29) ಸೋದರ ದೇವರಾಜ ಆಚಾರ್ಯ, ಬಸವರಾಜ್‌ ಮೋಗವೀರ ಸಹಿತ 5 ಮಂದಿ ಅಯ್ಯಪ್ಪ ವ್ರತಧಾರಿಗಳು ಡಿ. 30ರಂದು ಬೆಳಗ್ಗೆ ಕೊಲ್ಲೂರು ಕ್ಷೇತ್ರ ದರ್ಶಿಸಿ ಗೂಡ್ಸ್‌ ಟೆಂಪೋದಲ್ಲಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದರು. ಹಾದಿಯಲ್ಲಿ ಆಕಸ್ಮಿಕವಾಗಿ ಟೆಂಪೋ ಮಗುಚಿ ಬಿದ್ದ ಪರಿಣಾಮವಾಗಿ ಗಂಭಿರ ಗಾಯಗೊಂಡ ಗುರುರಾಜ ಆಚಾರ್ಯ ಸ್ಥಳದಲ್ಲೇ ಮƒತಪಟ್ಟರು. ಮಿಕ್ಕುಳಿದವರು ಸಣ್ಣಪುಟ್ಟ ಗಾಯಗೊಂಡು ಕುಂದಾಪುರ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಲ್ಲೂರು ನಿವಾಸಿ ದಿ| ಮುತ್ತಯ್ಯ ಆಚಾರ್ಯರವರ ಪುತ್ರನಾದ ಮೃತರು 7 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಇನ್ನೆರಡು ದಿವಸಗಳಲ್ಲಿ ಶಬರಿಮಲೆ„ ಯಾತ್ರೆಗೆ ತೆರಳಬೇಕಾಗಿದ್ದ ಗುರುರಾಜರು ಸಾವನ್ನಪ್ಪಿರುವುದು ವಿಧಿಧಿಯ ಆಟವೆಂದು ದಿಗ್ಭ್ರಮೆಗೊಂಡ ಸ್ಥಳೀಯರು ದುಃಖತಪ್ತರಾಗಿ ನುಡಿದಿದ್ದಾರೆ. ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com