ಯುವತಿ ನಾಪತ್ತೆ

ಕುಂದಾಪುರ: ಆಜ್ರಿ ಗ್ರಾಮದ ಕಮಲಶಿಲೆಯ ನಿವಾಸಿ ಶಾರದಾ (23) ಅವರು ಮನೆಯಿಂದ ಕೆಲಸಕ್ಕೆಂದು ಹೋದವರು ಕಾಣೆಯಾಗಿತ್ತಾಳೆ ಎಂದು ಆಕೆಯ ತಾಯಿ ಶಂಕರನಾರಾಯಣ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಮಲಶಿಲೆಯ ಗೇರು ಬೀಜ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದ ಆಕೆ ಡಿ.5ರ ಬೆಳಗ್ಗೆ ಕೆಲಸಕ್ಕೆಂದು ಹೋದವರು ಮನೆಗೆ ಬಾರದೇ, ಸಂಬಂಧಿಕರ ಮನೆಗಳಿಗೂ ಹೋಗದೇ ಕಾಣೆಯಾಗಿರುತ್ತಾಳೆ. ಸುಮಾರು 4.5 ಅಡಿ ಎತ್ತರದ , ಸಾಧಾರಣ ಶರೀರದ ಕೋಲು ಮುಖದ ಈಕೆ ಕೆಂಪು ಮಿಶ್ರಿತ ಕಪ್ಪು ಚೂಡಿದಾರವನ್ನು ಧರಿಸಿದ್ದಾಳೆ. ಈಕೆಯನ್ನು ಗುರುತಿಸಿದವರು ಶಂಕರನಾರಾಯಣ ಠಾಣೆ (08259-280299)ನ್ನು ಸಂಪರ್ಕಿಸಲು ಕೋರಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com