ಗಂಗೊಳ್ಳಿ : ಗುಜ್ಜಾಡಿ ಗ್ರಾಮದ ನಾಯಕವಾಡಿಯ ನಿವಾಸಿ ಕೃಷ್ಣ ಪೂಜಾರಿ (55) ತ್ರಾಸಿ ಬೀಚ್ ಬಳಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಕುಡಿತದ ಚಟವಿದ್ದು ಕಳೆದ ಒಂದು ವರ್ಷದಿಂದ ಟಿ.ಬಿ.ಕಾಯಿಲೆ ಇದ್ದಿರುತ್ತದೆ. ಈ ಕಾಯಿಲೆಗೆ ಚಿಕಿತ್ಸೆ ಮಾಡಿದರೂ ಗುಣಮುಖವಾಗದ ಹಿನಬ್ನಲೆಯಲ್ಲಿ ಜಿಗುಪ್ಸೆಗೊಂಡು ಈ ಕೃತ್ಯ ಎಸೆಗಿದ್ದಾರೆ ಎಂದು ಸತೀಶ್ ಪೂಜಾರಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.