ಗಂಗೊಳ್ಳಿ: ಗಂಗೊಳ್ಳಿಯ ರಾಮಮಂದಿರದ ಬಳಿ ನಿವಾಸಿ ಸಂತೋಷ್ ಕುಮಾರ್ ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎ.ಐ.ಎಫ್ನಲ್ಲಿ ಉದ್ಯೋಗದಲ್ಲಿದ್ದ ಸಂತೋಷ್ ಕುಮಾರ್ (41) ಕಳೆದ ಆರು ತಿಂಗಳಿಂದ ಕೆಲಸದಿಂದ ವಜಾಗೊಂಡಿದ್ದು ಗುರುವಾರ ರಾತ್ರಿ ಊಟ ಆದ ಕೂಡಲೇ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಅವನನ್ನು ಎತ್ತಿ ಅಂಬುಲೆನ್ಸ್ನಲ್ಲಿ ಕುಂದಾಪುರ ಸರಕಾರಿ ಕರೆದುಕೊಂಡು ಕೊಂಡು ಹೋದಾಗ ಮೃತಪಟ್ಟಿರುತ್ತಾರೆ. ಕೆಲಸ ಕಳೆದುಕೊಂಡ ಬಗ್ಗೆ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.