ಕೊಲ್ಲೂರು: ಮುದೂರಿನ ಮೂಕಾಂಬಿಕಾ ಎಸ್ಟೇಟ್ಗೆ ಡಿ. 9ರಂದು ನುಗ್ಗಿದ ಗುಂಪೊಂದು ಅಲ್ಲಿನ ಶೆಡ್ಗೆ ಬೆಂಕಿ ಹಚ್ಚಿದ ಪರಿಣಾಮವಾಗಿ ಬೆ„ಕ್ ಸಮೇತ ರೂ. 1.50 ಲಕ್ಷ ಮೌಲ್ಯದ ಸೊತ್ತುಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ಅರಣ್ಯ ಇಲಾಖೆಯ ಅನುಮತಿ ಮೇರೆಗೆ 120 ಎಕ್ರೆ ಪಟ್ಟಾ ಭೂಮಿಯ ನಿರುಪಯೋಗಿ ಮರಗಳನ್ನು ಎಸ್ಟೇಟ್ ಮಾಲಕರು ಕಡಿಸಿ ಭೂಮಿಯನ್ನು ಸಮತಟ್ಟಾಗಿಸುತ್ತಿದ್ದರು. ಏತನ್ಮಧ್ಯೆ ಅಲ್ಲಿನ ನಿವಾಸಿಗಳು ಎಸ್ಟೇಟ್ ಮಾಲಕನಿಂದ ಹಣ ನೀಡುವಂತೆ ಒತ್ತಾಯಿಸಿದ್ದು, ಹಣ ನೀಡಲು ನಿರಾಕರಿಸಿದ ಕಾರಣ ದ್ವೇಷ ಸಾಧನೆ ಹಾಗೂ ಅಲ್ಲಿನ ಕಾರ್ಮಿಕರನ್ನು ಓಡಿಸುವ ಉದ್ದೇಶದಿಂದ ಶೆಡ್ಗೆ ಬೆಂಕಿ ಹಚ್ಚಿರುವುದಾಗಿ ಎಸ್ಟೇಟ್ ಸೂಪರ್ವೈಸರ್ ಮ್ಯಾಥ್ಯೂ ಕೊಲ್ಲೂರು ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ವಾಸುದೇವ, ಜೊಸೇಫ್ ಕುಮ್ಮಕ್ಕಿನಿಂದ ಇತರ 7 ಮಂದಿ ಈ ಕೃತ್ಯ ಎಸಗಿರುವುದಾಗಿ ಆರೋಪಿಸಿದ ಅವರು ಬಾಳೆ ತೋಟವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಕೊಲ್ಲೂರು ಎಸ್.ಐ. ದೇವೇಂದ್ರ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ಇತ್ತು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.