ಗಂಗೊಳ್ಳಿ: ಮೊಬೆ„ಲ್‌ ಟವರ್‌ ಬಳಿ ಅಗ್ನಿ ಅಕಸ್ಮಿಕ

ಗಂಗೊಳ್ಳಿ: ಗಂಗೊಳ್ಳಿಯ ಮೊಬೈಲ್‌ ಟವರ್‌ ಬಳಿ ಅಗ್ನಿ ಅವಘಡ ಸಂಭವಿದ್ದು, ಮೊಬೆ„ಲ್‌ನ ಶೆಲ್ಟರ್‌ ಸಂಪೂರ್ಣ ಭಸ್ಮವಾಗಿ ಲಕ್ಷಾಂತರ ರೂ. ಹಾನಿ ಸಂಭವಿಸಿದ ಘಟನೆ ಗಂಗೊಳ್ಳಿಯ ಎಸ್‌.ವಿ. ಜ್ಯೂನಿಯರ್‌ ಕಾಲೇಜು ಬಳಿ ಸಂಭವಿಸಿದೆ.

ಉಡುಪಿಯ ಎಸೆಂಡ್‌ ಟೆಲಿಕಾಂನವರ ಐಡಿಯಾ ಮೊಬೆ„ಲ್‌ ಟವರ್‌ ಶೆಲ್ಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಕೆಲವೇ ಕ್ಷಣಗಳಲ್ಲಿ ಬೆಂಕಿಯು ಇಡೀ ಶೆಲ್ಟರ್‌ನ್ನು ಆವರಿಸಿಬಿಟ್ಟಿತು. ಬೆಂಕಿಯ ಕೆನ್ನಾಲಿಗೆಗೆ ಅಕ್ಕಪಕ್ಕದಲ್ಲಿದ್ದ ಗಿಡಮರಗಳು ಸುಟ್ಟು ಹೋಗಿದೆ. ಬೆಂಕಿ ಹೊತ್ತಿಕೊಂಡ ಸಂದರ್ಭ ವಿದ್ಯುತ್‌ ಸರಬರಾಜು ಇಲ್ಲದಿರುವುದರಿಂದ ಭಾರಿ ಅನಾಹುತ ತಪ್ಪಿ ಹೋಗಿದೆ. ಶೆಲ್ಟರ್‌ನಲ್ಲಿ ಮೊಬೆ„ಲ್‌ ನೆಟ್‌ವರ್ಕ್‌ಗೆ ಸಂಬಂಧಪಟ್ಟ ಉಪಕರಣಗಳು, ಬ್ಯಾಟರಿ ಸಹಿತ ಅನೇಕ ಉಪಕರಣಗಳಿದ್ದು, ಇವೆಲ್ಲವೂ ಸಂಪೂರ್ಣವಾಗಿ ಸುಟ್ಟು ಕರಕಾಲಾಗಿದೆ.

ಬೆಂಕಿ ಹೊತ್ತಿಕೊಂಡಾಗ ಸ್ಥಳೀಯ ಯುವಕರು ಮನೆಯ ತಾರಸಿ ಮೇಲಿನ ನೀರಿನ ಟ್ಯಾಂಕಿನಿಂದ ಮತ್ತು ಸಮೀಪದಲ್ಲಿರುವ ಬಾವಿಯೊಂದರಿಂದ ನೀರನ್ನು ತೆಗೆದು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದರು. ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸುವಾಗ ಬೆಂಕಿಯನ್ನು ನಂದಿಸಲಾಗಿತ್ತು. ಬೆಳಗ್ಗಿನಿಂದ ವಿದ್ಯುತ್‌ ಸರಬರಾಜು ಇಲ್ಲದಿರುವುದರಿಂದ ಬೆಂಕಿ ನಂದಿಸುವ ಕಾರ್ಯಕ್ಕೆ ತೊಡಕುಂಟಾಯಿತು. ಶೆಲ್ಟರ್‌ನಲ್ಲಿ ಉಂಟಾದ ಶಾರ್ಟ್‌ ಸರ್ಕ್ನೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ಆದರೆ ಈವರೆಗೆ ಯಾವುದೇ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

ಅಗ್ನಿ ಅವಘಡದಿಂದ ಲಕ್ಷಾಂತರ ರೂ. ಮೌಲ್ಯದ ಉಪಕರಣಗಳು ಸುಟ್ಟು ಹೋಗಿರಬಹುದೆಂದು ಅಂದಾಜಿಸಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com