ಬೈಂದೂರು: ಆಸ್ತಿಯ ಅಳತೆಯ ವಿಚಾರದಲ್ಲಿ ಕಚೇರಿಗೆ ತೆರಳಿದಾಗ ಬೈಂದೂರು ವಿಶೇಷ ತಹಶೀಲ್ದಾರ್ ತಿಪ್ಪೇಸ್ವಾಮಿ ಅವರು ಅವಾಚ್ಯಶಬ್ದಗಳಿಂದ ಬೈದುದಲ್ಲದೇ ಪುನಃ ರಾತ್ರಿ ವೇಳೆ ಮೊಬೈಲ್ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಜಡ್ಕಲ್ನ ನಿವಾಸಿ ಶಿಬು ಕೆ.ಜೆ. ಕುಂದಾಪುರ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದಾರೆ.
ತನ್ನ ನೆರೆಕೆರೆಯ ಸ್ವಾಮಿ ಕೃಷ್ಣಾನಂದ ಅವರ ಆಸ್ತಿ ಆಳತೆಯ ಬಗ್ಗೆ ಚರ್ಚಿಸುವರೇ ಬೈಂದೂರು ವಿಸೇಷ ತಹಶೀಲ್ದಾರರ ಕಚೇರಿಗೆ ತೆರಳಿದಾಗ ವಿಶೇಷ ತಹಶೀಲ್ದಾರರು ಸರಿಯಾದ ಸಹಕಾರ ನೀಡದೇ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಲು ಮೇಲಾಧಿಕಾರಿಯವರಲ್ಲಿ ಹೋಗಿ ಎಂದು ಬೆದರಿಸಿದ್ದಲ್ಲದೇ ನಂತರ ಮೊಬೈಲ್ಗೆ ಅಗೌರವದಿಂದ ವರ್ತಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.