ನಾಗೂರು: ಬಸ್ಸು ನಿಲ್ದಾಣದ ಬಳಿ ಕಚ್ಚಾ ರಸ್ತೆಯಲ್ಲಿ ನಿಂತಿದ್ದ ವೇಳೆ ಲಾರಿಯೊಂದು ಢಿಕ್ಕಿಯಾದ ಪರಿಣಾಮ ಪಾದಚಾರಿ ಬಿಜೂರು ನಿವಾಸಿ ಸಿಂಗಾರಿ ಶೆಡ್ತಿ (47) ಗಂಭೀರವಾಗಿ ಗಾಯಗೊಂಡಿದ್ದಾರೆ. ಬಿಜೂರಿನಿಂದ ಸರಕಾರಿ ಬಸ್ಸಿನಲ್ಲಿ ಬಂದು ಯರುಕೋಣಿ ಕಡೆಗೆ ಹೋಗುವರೇ ಬಸ್ಸು ನಿಲ್ದಾಣದ ಬಳಿ ನಿಂತಿರುವಾಗ ಲಾರಿ ತೀರಾ ಎಡಬದಿಗೆ ಚಲಾಯಿಸಿ ಈ ಘಟನೆ ಸಂಭವಿಸಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.