ಕುಂದಾಪುರ: ವಡ್ಡರ್ಸೆ ಗ್ರಾಮದಲ್ಲಿ ಬಾರ್ಕೂರಿನ ರುಕ್ಮಿಣಿ ಶೆಡ್ತಿ ಮೆಮೊರಿಯಲ್ ನ್ಯಾಷನಲ್ ಸರ್ಕಾರಿ ಕಾಲೇಜಿನ ಪದವಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಎನ್ ಎಸ್ ಎಸ್ ಕ್ಯಾಂಪ್ನಲ್ಲಿ ಉಳಿದುಕೊಂಡಿದ್ದ ವಿದ್ಯಾರ್ಥಿನಿಯರ ಮೇಲೆ ಮುಸುಕುಧಾರಿಗಳು ಕ್ಲೊರೊಫಾರ್ಮ್ ಎರಚಿದ ಪರಿಣಾಮ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಡಿಸೆಂಬರ್ 25ರಂದು ರಾತ್ರಿ ನೆಡೆದಿದೆ.
ಘಟನೆ ವಿವರ
ವಡ್ಡರ್ಸೆ ಗ್ರಾಮದಲ್ಲಿ ಪದವಿ ವಿದ್ಯಾರ್ಥಿಗಳು ನಡೆಸೆತ್ತಿದ್ದ ಎನ್ ಎಸ್ ಎಸ್ ಕ್ಯಾಂಪ್ನಲ್ಲಿ ದಿನನಿತ್ಯದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಪ್ರದರ್ಶನ ಮುಗಿದ ಬಳಿಕ ವಿದ್ಯಾರ್ಥಿನಿಯರು ಊಟ ಮುಗಿಸಿ ಶೌಚಾಲಯಕ್ಕೆ ತೆರಳುವ ವೇಳೆ ಮುಸುಕುದಾರಿ ಅಗಂತುಕರು ಮೂವರು ವಿದ್ಯಾರ್ಥಿನಿಯರ ಮೇಲೆ ಕ್ಲೊರೊಫಾರ್ಮ್ ಎರಚಿದ್ದಾರೆ .
ತಕ್ಷಣ ಬೆದರಿದ ವಿದ್ಯಾರ್ಥಿನಿಯರು ಇತರೇ ವಿದ್ಯಾರ್ಥಿನಿಯರ ಬಳಿ ಬಂದು ಎನೂ ಪ್ರತಿಕ್ರಿಯೆ ನೀಡದೆ ಮೂರ್ಛೆ ಹೊದರು. ಇದನ್ನು ನೋಡಿದ ಉಳಿದ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹೆದರಿ ಮಂಕಾಗಿ ಹೋದರು. ಕೂಡಲೇ ಕಾಲೇಜಿನ ಪ್ರಾಧ್ಯಾಪಕರು ಮತ್ತು ಸ್ಥಳೀಯರ ನೆರವಿನಿಂದ ಅಸ್ವಸ್ಥ ವಿದ್ಯಾರ್ಥಿನಿಯರನ್ನು ಅಸ್ಪತ್ರೆಗೆ ದಾಖಲಿಸಲಾಯಿತು.
ಹದಿನೈದು ಮಂದಿ ವಿದ್ಯಾರ್ಥಿನಿಯರನ್ನು ಕೋಟ ಸರ್ಕಾರಿ ಆಸ್ಪತ್ರೆಗೆ , ಎಂಟು ಮಂದಿ ವಿದ್ಯಾರ್ಥಿನಿಯರನ್ನು ಕೋಟೆಶ್ವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಎಲ್ಲಾ ವಿದ್ಯಾರ್ಥಿನಿಯರು ಗುಣಮುಖರಾಗಿದ್ದು ಆತಂಕದಿಂದ ಹೊರ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ನೆಡೆದ ಸ್ಥಳಕ್ಕೆಜಿಲ್ಲಾ ಎಸ್ಪಿ ಡಾ. ಬೋರಲಿಂಗಯ್ಯ ಅವರು ಭೇಟಿ ನೀಡಿ ಪರಿಶೀಲಿಸಿ ಕೂಡಲೇ ಘಟನೆಗೆ ಕಾರಣರಾದವರನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.