ಕೋಟ: ತಾಯಿ ಹಣ ನೀಡಿಲಿಲ್ಲ ಎಂದು ಬೇಸರಿಸಿ ಶಾಲಾ ಬಾಲಕಿ ಅತ್ಮಹತ್ಯಗೆ ಶರಣಾದ ಘಟನೆ ಕೋಟ ಸಮೀಪದ ಮೂಡುಗಿಳಿಯಾರಿನಲ್ಲಿ ಶುಕ್ರವಾರ ನಡೆದಿದೆ.
ಕೋಟ ವಿವೇಕ ವಿದ್ಯಾಸಂಸ್ಥೆಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕೋಟ ಮೂಡುಗಿಳಿಯಾರಿನ ನೇತಾಜಿ ನಗರ ನಿವಾಸಿ ಶಿವ ಶ್ರೀಯಾನ್ ಹಾಗೂ ಬೇಬಿ ದಂಪತಿಗಳ ಪುತ್ರಿ ಶುಭ (15) ನೇಣಿಗೆ ಶರಣಾದ ಬಾಲಕಿ.
ಇನ್ನೂರು ರೂಪಾಯಿ ಜೀವ ಬಲಿ ಪಡೆಯಿತೇ ?: ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ತಾಯಿಯಲ್ಲಿ ಶುಭ ಇನ್ನೂರು ರೂಪಾಯಿಯನ್ನು ಖರ್ಚಿಗೆ ಕೇಳಿದ್ದಳು, ಇದನ್ನ ನೀಡಿಲ್ಲ ಎನ್ನುವ ಕಾರಣಕ್ಕೆ, ಈಕೆ ಮನನೊಂದು ಅತ್ಮಹತ್ಯಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ. ಆದರೆ ಕೇವಲ ಇನ್ನೂರು ರೂ ಬಾಲಕಿಯ ಜàವ ಬಲಿ ಪಡೆಯಿತೇ? ಅಥವಾ ಸಾವಿಗೆ ಬೇರೆ ಕಾರಣಗಳಿವೆಯೇ ಎನ್ನುವ ಸಂಶಯ ಸ್ಥಳಿಯರಲ್ಲಿ ಮೂಡಿದೆ.
ಬಡತನದ ಕುಟುಂಬ : ಬಡ ಕುಟುಂಬದವರಾದ ಮೃತಳ ತಂದೆ ಮೀನುಗಾರಿಕೆಯ ಕೆಲಸ ಮಾಡಿಕೊಂದಿದ್ದು, ತಾಯಿ ಬಾವಿ ಕೆಲಸವನ್ನು ನಿರ್ವಹಿಸಿ ಕಷ್ಟಪಟ್ಟು ತನ್ನ ಎರಡು ಮಕ್ಕಳಿಗೆ ವಿದ್ಯಬ್ಯಾಸ ನೀಡುತ್ತಿದ್ದರು. ಈ ಘಟನೆಯಿಂದ ಕುಟುಂಬ ತೀವ್ರವಾದ ಶೋಕಸಾಗರದಲ್ಲಿ ಮುಳುಗಿದೆ.
ಶಾಲೆಗೆ ತೆರಳುತ್ತೆನೆ ಎಂದು ಹೇಳಿ ಅತ್ಮಹತ್ಯೆ : ಹಟ ಸ್ವಭಾವದ ಹುಡುಗಿಯಾದ ಶುಭ ತಾಯಿ ಹಣ ನೀಡಿಲ್ಲ ಎನ್ನುವ ಬೇಸರದಿಂದಲೇ ಬೆಳ್ಳಿಗ್ಗೆ ಶಾಲೆಯ ಸಮಯಕ್ಕೆ ಸರಿಯಾಗಿ ಸಮವಸ್ತ್ರಧರಿಸಿ ಶಾಲೆಗೆ ಹೊರಡಲು ಅಣಿಯಾಗಿದ್ದಳು ಹಾಗೂ ತನ್ನ ತಮ್ಮ ಕಾರ್ತಿಕನಲ್ಲಿ ಶಾಲೆಗೆ ತೆರಳಲು ತಿಳಿಸಿದ್ದಳು. ತಮ್ಮ ಶಾಲೆಗೆ ತೆರಳಿದ ನಂತರ ಮನೆಯ ಹೊರಗಿನಿಂದ ಬಾಗಿಲು ಹಾಕಿಕೊಂಡು ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.
ಅನಂತರ ಕೆಲಸದ ಅಡಚಣೆಯಿಂದ ತಾಯಿ 10.30ರ ಸುಮಾರಿಗೆ ಮನೆಗೆ ವಾಪಸ್ಸಾಗಿದ್ದು, ಒಳಗಿನಿಂದ ಬಾಗಿಲು ಹಾಕಿದ್ದು ಗಮನಿಸಿ ಆತಂಕಗೊಂಡು ಸ್ಥಳಿಯರನ್ನ ಕೂಗಿ ಕರೆದಿದ್ದಾರೆ, ಮನೆಯ ಹಂಚನ್ನು ಕಿತ್ತು ಒಳನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ನಾಯಕ್, ಕೋಟ ಗ್ರಾ.ಪಂ ಅಧ್ಯಕ್ಷ ಶಿವ ಪೂಜಾರಿ ಮತ್ತಿತರರು ಆಗಮಿಸಿದ್ದು, ಈ ಕುರಿತು ಕೋಟ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.