ತ್ರಾಸಿ: ತ್ರಾಸಿ ಬೀಚ್ನ ಬಳಿ ನಿಲ್ಲಿಸಿದ್ದ ಲಾರಿಯಿಂದ ಸುಮಾರು 82 ಸಾವಿರ ಮೌಲ್ಯದ ಸರಕುಗಳನ್ನು ಕಳವು ಮಾಡಿದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ಹುಬ್ಬಳ್ಳಿಯ ಟ್ರಾನ್ಸ್ಪೊàರ್ಟ್ ಕಚೇರಿಯಿಂದ ಸರಕುಗಳನ್ನು ತುಂಬಿಕೊಂಡು ಮಂಗಳೂರಿಗೆ ತೆರಳುತ್ತಿದ್ದ ಲಾರಿಯನ್ನು ಚಾಲಕ ನಿದ್ರೆ ಮಾಡಲು ತ್ರಾಸಿ ಬೀಚ್ಬಳಿಯ ಅನ್ನಪೂಣೇಶ್ವರಿ ಹೋಟೇಲ್ ಬಳಿ ನಿಲ್ಲಿಸಿದಾಗ ಈ ಘಟನೆ ನಡೆದಿದೆ.
ಲಾರಿಯ ಹಿಂಭಾಗದ ಟಾರ್ಪಲ್ನ್ನು ತೆಗೆದು ನಂತರದ ಕಬ್ಬಿಣದ ನೆಟ್ನ್ನು ಕಳಚಿ ಕಳವು ನಡೆಸಲಾಗಿದೆ. ಲಾರಿಯಲ್ಲಿದ್ದ ಮುದ್ರಿತ ಪುಸ್ತಕಗಳು, ಸೀರೆ ಬಂಡಲ್ಗಳು, ಸಿದ್ಧ ಉಡುಪುಗಳ ಪ್ಯಾಕೇಟ್, ಸ್ಟೇಷನರಿ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ.
ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಸಿ.ಬಿ.ಪಾಟೇಲ್, ಎಸ್.ಐ.ಸಂಪತ್ ಕುಮಾರ್ ಭೇಟಿ ನೀಡಿದ್ದಾರೆ. ಲಾರಿ ಚಾಲಕ ಶಿಗ್ಗಾಂವ್ನ ಬಸವರಾಜ ಕೊಡಪ್ಪನವರ್ ಗಂಗೊಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.