ಕುಂದಾಪುರ: ಗಂಗೊಳ್ಳಿಯ ಲೈಟ್ಹೌಸ್ ಸಮುದ್ರ ತೀರದಲ್ಲಿ ಪಾತಿ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಅಲೆಗಳ ಹೊಡೆತಕ್ಕೆ ಸಿಲುಕಿ ಸ್ಥಳೀಯ ನಿವಾಸಿ ಕಿಶನ್ ಪಟೇಲ್ (17) ಮೃತಪಟ್ಟಿದ್ದಾರೆ.
ಗಂಗಾಧರ ಪಟೇಲ ಅವರು ತನ್ನ ಪುತ್ರ ಕಿಶನ್ರೊಂದಿಗೆ ಮೀನುಗಾರಿಕೆಗೆ ತೆರಳಿದ್ದು, ಅಲೆಗಳಿಗೆ ದೊಣಿ ಮುಗುಚಿದ ಕಾರಣ ಕಿಶನ್ ನೀರಿನಲ್ಲಿ ಕೊಚ್ಚಿಹೋಗಿದ್ದರು. ಗಂಗಾಧರ ಪಟೇಲ್ ಅವರು ದೋಣಿಯನ್ನು ಆಧರಿಸಿಕೊಂಡು ದಡಕ್ಕೆ ಸೇರಿರುತ್ತಾರೆ. ಕಿಶನ್ ಅವರ ಶವ ಶುಕ್ರವಾರ ಗುಜ್ಜಾಡಿ ಬಳಿ ಸಿಕ್ಕಿರುತ್ತದೆ.
ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.