ಕುಂದಾಪುರ: ಇಲ್ಲಿನ ಗಾಂಧಿ ಮೈದಾನದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆ.ಎಸ್.ಆರ್.ಟಿ.ಬಸ್ಸು , ಎರಡು ಬೆ„ಕ್ ಹಾಗೂ ಆಲ್ಟೋ ಕಾರುಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ.
ಹೆದ್ದಾರಿಯನ್ನು ದಾಟಲು ಯತ್ನಿಸುತ್ತಿದ್ದ ಬುಲೆಟ್ ಬೈಕ್ಗೆ ಇನ್ನೊಂದು ಬೆ„ಕ್ ಮೊದಲು ಢಿಕ್ಕಿ ಹೊಡೆದಿತ್ತು. ಢಿಕ್ಕಿಯಾದ ರಭಸಕ್ಕೆ ಬುಲೆಟ್ ಸವಾರರು ರಸ್ತೆಗೆ ಬಿದ್ದರು. ಇದೇ ಸಂದರ್ಭದಲ್ಲಿ ಉಡುಪಿ ಕಡೆಯಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ.ಬಸ್ಸು ರಸ್ತೆಯಲ್ಲಿ ಬಿದ್ದವರನ್ನು ತಪ್ಪಿಸಲು ರಸ್ತೆಯ ಬಲ ಭಾಗಕ್ಕೆ ಚಲಿಸಿದ್ದರಿಂದ ಎದುರಿನಿಂದ ಬರುತ್ತಿದ್ದ ಆಲ್ಟೋ ಕಾರಿಗೆ ಬಸ್ಸು ಢಿಕ್ಕಿ ಹೊಡೆಯಿತು. ಅಪಘಾತದ ತೀವ್ರತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರನ್ನು ಪುತ್ತೂರಿನ ಬೊಳುವಾರು ನಿವಾಸಿ ನಿವೃತ್ತ ಕರ್ನಾಟಕ ಬ್ಯಾಕ್ ಮ್ಯಾನೇಜರ್ ಬಿ. ಪ್ರೇಮಚಂದ್ರ ರಾವ್, ಅವರ ಪತ್ನಿ ಜಯಶ್ರೀ ರಾವ್ ಹಾಗೂ ಕಾರಿನ ಚಾಲಕ ರಾಧಾಕೃಷ್ಣ ಕೆ. ಎಂದು ಗುರುತಿಸಲಾಗಿದೆ. ಇವರು ಪುತ್ತೂರಿನಿಂದ ಗುರುವಾರ ಸಂಜೆ ಗೋಕರ್ಣಕ್ಕೆ ,ಇಡಗುಂಜಿ ದೇವಸ್ಥಾನಕ್ಕೆ ತೆರಳಿ ಆನೆಗುಡ್ಡೆ ದೇವರ ದರ್ಶನ ಪಡೆದು ಪುತ್ತೂರಿಗೆ ತೆರಳಲಿದ್ದರು. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.