ಹೆಮ್ಮಾಡಿ : ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಹೋಟೇಲ್ ಜ್ಯುವೆಲ್ ಪಾರ್ಕಿನ ಕೊಠಡಿಯಲ್ಲಿ ರೂ.ಒಂದು ಕೋಟಿ ಬೆಲೆ ಬಾಳುವ ಹೆರಾಯನ್ ದಾಸ್ತಾನು ಇಟ್ಟಿದ್ದ ಆರೋಪಿಗಳಾದ ಕುಂದಾಪುರದ ಖಾರ್ವಿಕೇರಿಯ ಸುಧೀರ್ ಹೆಗ್ಡೆ ಹಾಗೂ ಭಟ್ಕಳದ ಶಿರಾಲಿಯ ದಿವಾಕರ ದೇವಾಡಿಗರನ್ನು ಉಡುಪಿಯ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.
ಆರೋಪಿಗಳಿಬ್ಬರು ಹೋಟೆಲ್ನಲ್ಲಿ ರೂಮ್ ಪಡೆದು ಹೆರಾಯನ್ ಮಾರಾಟಕ್ಕಾಗಿ ಪ್ರಯತ್ನಿಸುತ್ತಿದ್ದರು. ಆರೋಪಿಗಳನ್ನು ಅಬಕಾರಿ ಇಲಾಖೆಯವರು 2013 ಎಪ್ರಿಲ್ 18ರಂದು ರಾತ್ರಿ 7ಕ್ಕೆ ದಾಳಿ ನಡೆಸಿ ಬಂಧಿಸಿದ್ದರು. ಹೆರಾಯಿನ್ ಪರೀಕ್ಷಾ ಕಿಟ್ನಲ್ಲಿ ಪರಿಶೀಲಿಸಿದಾಗ ಹೆರಾಯನ್ ಇರುವುದು ಖಚಿತವಾಗಿತ್ತು. ಅಬಕಾರಿ ಇಲಾಖೆಯವರು ಕಂದಾಯ ಇಲಾಖೆಯ ಅಧಿಕಾರಿಗಳ ಸಮಕ್ಷಮ ಮಹಜರನ್ನು ಬರೆದು ಕಾರ್ಯಾಚರಣೆಯನ್ನು ನಡೆಸಿದ್ದರು. ಅವಿಭಜಿತ ದ.ಕ.ಜಿಲ್ಲೆಯಲ್ಲಿಯೇ ಇದು ದೊಡ್ಡ ಪ್ರಕರಣ ಎನ್ನಲಾಗಿದೆ. ಪ್ರಕರಣದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿರಲಿಲ್ಲ. ಆರೋಪಿಗಳಾದ ಸುಧೀರ್ ಹೆಗ್ಡೆ ಹಾಗೂ ದೀವಾಕರ ದೇವಾಡಿಗ ಅವರ ಪರವಾಗಿ ಕುಂದಾಪುರ ರವಿಕಿರಣ್ ಮುಡೇಶ್ವರ ವಾದಿಸಿದ್ದರು.