ಬೈಂದೂರು: ಪಡುವರಿ ಗ್ರಾಮದ ಚಿಲುಮೆ ಬಳಿ ಲಾರಿಯೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ಧ ಪರಿಣಾಮ ಲಾರಿಯಲ್ಲಿದ್ದ ಸತಾರಾ ಎನ್ನುವವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಕುಂದಾಪುರದಿಂದ ಭಟ್ಕಳದತ್ತ ಸಾಗುತ್ತಿದ್ದ ಲಾರಿಯಲ್ಲಿ ಚಾಲಕ ಸೇರಿದಂತೆ ಮೂವರು ಪ್ರಯಾಣಿಸುತ್ತಿದ್ದು, ಲಾರಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತ್ತು. ಗಾಯಾಳುಗಳನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.