ಹೊಟ್ಟೆಯಲ್ಲಿದ್ದ 8 ಕೆಜಿ ತೂಕದ ಗಡ್ಡೆ ಹೊರಕ್ಕೆ!

ಭಟ್ಕಳ: ಮಹಿಳೆಯೋರ್ವಳ ಹೊಟ್ಟೆಯಲ್ಲಿದ್ದ ಸುಮಾರು 8 ಕೆಜಿ ತೂಕದ ಎರಡು ಗಡ್ಡೆಯನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ್ದಾರೆ.

ಯಲ್ವಡಿಕವೂರು ಗ್ರಾಮದ ಮಹಿಳೆಯೊಬ್ಬಳು ಕಳೆದ ಎರಡು-ಮೂರು ವರ್ಷಗಳಿಂದ ತೀವ್ರತರದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಈಕೆಯನ್ನು ತಪಾಸಣೆ ನಡೆಸಿದ ಸರಕಾರಿ ಆಸ್ಪತ್ರೆ ಸರ್ಜನ್‌ ಡಾ| ಮಂಜುನಾಥ ಶೆಟ್ಟಿ ಮತ್ತು ಅರವಳಿಕೆ ತಜ್ಞೆ ಡಾ| ಸವಿತಾ ಕಾಮತ ಶಸ್ತ್ರ ಚಿಕಿತ್ಸೆ ನಡೆಸಿ ಆಕೆಯ ಹೊಟ್ಟೆಯಲ್ಲಿದ್ದ ಗಡ್ಡೆ ಹೊರ ತೆಗೆದಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಮಹಿಳೆ ಚೇತರಿಸಿಕೊಂಡಿದ್ದಾಳೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com