ಆಕಸ್ಮಿಕ ಬೆಂಕಿ ತಗಲಿ ಮಹಿಳೆ ಸಾವು

ಕುಂದಾಪುರ: ಆನಗಳ್ಳಿಯ ನಿವಾಸಿ ಮೇರಿ ಡಿ'ಸೋಜಾ (88) ನ. 25ರಂದು ಸಂಜೆ ಮನೆಯಲ್ಲಿ ಬಿಸಿನೀರಿಗಾಗಿ ಒಲೆ ಹಚ್ಚುವಾಗ ಆಕಸ್ಮಿಕವಾಗಿ ಮೈಗೆ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅವಿವಾಹಿತರಾದ ಅವರು ಬೆಂಕಿ ತಗುಲಿದಾಗ ಸುಟ್ಟ ಗಾಯಗಳಿಂದ ಬೊಬ್ಬೆ ಹಾಕಿದಾಗ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com