ಕೋಟ : ಮಧುವನ ಸಮೀಪದ ಗರಿಕೆಮಠದ ವಾಟರ್ ಟ್ಯಾಂಕ್ ಬಳಿ ಅಳವಡಿಸಲಾದ ನರೇಂದ್ರ ಮೋದಿಗೆ ಶುಭ ಕೋರುವ ಬ್ಯಾನರ್ಗೆ ಕಿಡಿಗೆದಿಗಳು ಹಾನಿ ಮಾಡಿದ್ದಾರೆ. ಎಸ್.ಕೆ ಪ್ರಂಡ್ಸ ಎನ್ನುವ ಮೋದಿ ಅಭಿಮಾನಿ ಬಳಗದ ವತಿಯಿಂದ ಒಂದು ವಾರಗಳ ಹಿಂದೆ ಮೋದಿಗೆ ಶುಭಶಯ ಕೋರುವ ಬ್ಯಾನರ್ ಆಳವಡಿಸಿದ್ದು , ಅದನ್ನ ನಾಲ್ಕು ದಿನದ ಹಿಂದೆ ಹರಿದು ಹಾಕಲಾಗಿತ್ತು. ನಂತರ ಮತ್ತೂಂದು ಬ್ಯಾನರ್ ಆಳವಡಿಸಿದ್ದು ಅದನ್ನು ಕೂಡ ಶನಿವಾರ ರಾತ್ರಿ ಹಾನಿಗೊಳಿಸಲಾಗಿದೆ. ಘಟನೆ ಕುರಿತು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದು, ಭಾನುವಾರ ಕೋಟ ಠಾಣೆಗೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಇಂತಹ ಘಟನೆ ಅಕ್ಷಮ್ಯ ವಾಗಿದ್ದು, ಶಾಂತಿ ಸುವ್ಯವಸ್ಥೆ ಕಾಪಡುವ ನಿಟ್ಟಿನಲ್ಲಿ ಘಟನೆಗೆ ಸಂಭಂದಿಸಿದವರನ್ನ ಬಂದಿಸಿ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ,ಮುಖಂಡ ಶಿವರಾಮ ಉಡುಪ, ಶಕ್ತಿ ಕೇಂದ್ರದ ಅಧ್ಯಕ್ಷ ಸಂದೀಪ್ ಕುಂದರ್, ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು.