ಕೊಜೆ ಹೊಂಡಕ್ಕೆ ಬಿದ್ದ ಕಾರು

ಕೋಟ: ಕೋಟ ಸಮೀಪದ ಬೆಟ್ಲಕ್ಕಿಯಲ್ಲಿ ಕೊಜೆ ಹೊಂಡಕ್ಕೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬಿದ್ದು , ಸಂಪೂರ್ಣ ಜಖಂಗೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಕೋಟ ಕಡೆಯಿಂದ ಸಾ„ಬರಕಟ್ಟೆ ಕಡೆಗೆ ರಾತ್ರಿ 10ರ ಸುಮಾರಿಗೆ ತೆರಳುತ್ತಿದ್ದು ಕಾರಿಗೆ, ಬೆ„ಕೊಂದು ಅಡ್ಡ ಬಂದ ಪರಿಣಾಮ ಚಾಲಕ ನಿಯಂತ್ರಣ ತಪ್ಪಿ ಸುಮಾರು 18 ಅಡಿ ಆಳದ ಕೊಜೆ ಹೊಂಡಕ್ಕೆ ಕಾರು ಬಿದ್ದಿದ್ದು, ಚಾಲಕ ಕೂಗಿಕೊಂಡಾಗ ಆಸು ಪಾಸಿನವರು ಓಡಿ ಬಂದು ಚಾಲಕನನ್ನು ಮೇಲೆತ್ತಿದ್ದಾರೆ. ಇದರಿಂದ ಸಂಭವ್ಯ ಬಾರಿ ಅನಹುತವೊಂದು ತಪ್ಪಿದೆ. ಅನಂತರ ಕಾರನ್ನು ಜೆಸಿಬಿಯ ಮೂಲಕ ಮೇಲೆತ್ತಲಾಯಿತು.

ಆಪಘಾತ ತಡೆಯಲು ತಡೆಗೊಡೆಗಳಿಲ್ಲ : ಕೋಟ- ಬನ್ನಾಡಿ ರಸ್ತೆಯ ಉಪ್ಲಾಡಿಯಲ್ಲಿ ಅಪಾಯಕಾರಿ ಸ್ಥಿತಿಯ ಕೊಜೆ ಹೊಂದಗಳಿದ್ದು ಇವುಗಳಿಗೆ ಯಾವುದೇ ರೀತಿಯ ತಡೆಗೊಡೆಗಳಿಲ್ಲ . ಈ ಪ್ರದೇಶದಲ್ಲಿ ಚಾಲಕರ ನಿಯಂತ್ರಣ ತಪ್ಪಿ ಆನೇಕ ಆಪಘಾತಗಳು ಸಂಭವಿಸಿದ್ದು ಮುಂಜಾಗ್ರತೆಯ ಕ್ರಮವಾಗಿ ತಡೆಗೊಡೆ ನಿರ್ಮಿಸುವಂತೆ ಸ್ಥಳಿಯರು ಮನವಿ ಮಾಡಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com